More

    ವಿಪ ಚುನಾವಣೆ ಮತ ಯಾಚನೆಗೆ ಸಜ್ಜಾಗಿ   ಕಾಂಗ್ರೆಸ್ ಸಭೆಯಲ್ಲಿ ಮಯೂರ್ ಜಯಕುಮಾರ್ ಹೇಳಿಕೆ

    ದಾವಣಗೆರೆ: ವಿಧಾನ ಪರಿಷತ್ತಿನಲ್ಲಿ ಹೊಸ ಕಾನೂನುಗಳ ರಚನೆ ಹಾಗೂ ತಿದ್ದುಪಡಿ ಮಾಡಲು ಬಹುಮತ ಅಗತ್ಯವಿದೆ. ವಿಧಾನಪರಿಷತ್ತಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಡಿ.ಟಿ.ಶ್ರೀನಿವಾಸ್ ಅವರನ್ನು ಬೆಂಬಲಿಸಬೇಕು ಎಂದು ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
    ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
    ಆಗ್ನೇಯ ಶಿಕ್ಷಕರ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋಲಬಾರದು. ಜಿಲ್ಲೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮತಗಳಿವೆ. ಚುನಾವಣೆ ಪ್ರಚಾರಕ್ಕೆ ಸಮಯಾವಕಾಶ ಕಡಿಮೆಯಿದ್ದು ಈಗಿನಿಂದಲೇ ಶಿಕ್ಷಕರ ಬಳಿ ತೆರಳಿ ಮತ ಯಾಚಿಸಬೇಕೆಂದು ಮನವಿ ಮಾಡಿದರು.
    ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದು ಯಾರೂ ಸಹ ಈ ಚುನಾವಣೆಯನ್ನು ನಿರ್ಲಕ್ಷಿಸಬಾರದು. ಜಿಲ್ಲಾ ಮಟ್ಟದಲ್ಲಿ ವಾರ್ ರೂಂ ತೆರೆದು ತಾಲೂಕು ಮಟ್ಟದ ಸಮಿತಿ ರಚಿಸಿ ಎಲ್ಲಾ ಬ್ಲಾಕ್ ಅಧ್ಯಕ್ಷರ ಜತೆ ಚರ್ಚಿಸಿ ನಿತ್ಯವೂ ವರದಿ ನೀಡಬೇಕೆಂದು ಹೇಳಿದರು.
    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ಸಾಧ್ಯತೆ ಬಗ್ಗೆ ಕೆಲ ಸಮೀಕ್ಷೆಗಳು ತಿಳಿಸಿವೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅಭ್ಯರ್ಥಿ  ಡಿ.ಟಿ.ಶ್ರೀನಿವಾಸ್ ಪರ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು.
    ಶಾಸಕ ದೇವೇಂದ್ರಪ್ಪ ಮಾತನಾಡಿ ರಾಜಕೀಯದಲ್ಲಿ ಹೆಚ್ಚು ಅನುಭವ ಹೊಂದಿರುವ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರು ಉತ್ತಮ ಸೇವೆಗೆ ಮುಂದೆ ಬಂದಿದ್ದಾರೆ. ಜಗಳೂರು ಕ್ಷೇತ್ರದಲ್ಲಿ 280 ಮತಗಳಿದ್ದು ಮೊದಲ ಪ್ರಾಶಸ್ತ್ಯದ ಮತವನ್ನು ನಮ್ಮ ಅಭ್ಯರ್ಥಿಗೆ ನೀಡಬೇಕು ಎಂದರು.
    ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಮಾತನಾಡಿ, ವೇತನದಲ್ಲಿ ತಾರತಮ್ಯ, ಬಡ್ತಿ, ಹೀಗೆ ಹತ್ತು ಹಲವಾರು ಬೇಡಿಕೆಗಳು ಈಡೇರಬೇಕಿದೆ. ಖಾಸಗಿ, ಅನುದಾನಿತ ಸಂಸ್ಥೆ, ಸರ್ಕಾರಿ ಶಾಲೆಗಳು, ಪಿ.ಯು.ಸಿ. ಪದವಿ, ಸ್ನಾತಕೋತ್ತರ, ಡಿಪ್ಲೊಮಾ,  ಐ.ಟಿ.ಐ. ಕಾಲೇಜುಗಳಿಗೆ ಹೋಗಿ ಅಭ್ಯರ್ಥಿ ಪರ ಮತ ಕೇಳಿ ಎಂದು ಮನವಿ ಮಾಡಿದರು.
    ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಪದವೀಧರ ಮತ್ತು ಶಿಕ್ಷಕರ ಘಟಕದ ಕುಬೇರಪ್ಪ, ಉಸ್ತುವಾರಿಗಳಾದ ಸದಾನಂದ ಡಂಗಣ್ಣ, ಷಣ್ಮುಖ ಶಿವಳ್ಳಿ, ನಂದಿಗಾವಿ ಶ್ರೀನಿವಾಸ್,  ಡಿ.ಆರ್.ಪಾಟೀಲ್, ಎ.ಎಸ್. ವೀರಣ್ಣ, ಮುರುಗೇಂದ್ರಪ್ಪ, ರಾಮಲಿಂಗಪ್ಪ, ಕೆಪಿ ಪಾಲಯ್ಯ, ಮಲ್ಲಿಕಾರ್ಜುನ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts