More

    9 ವರ್ಷಗಳಲ್ಲಿ ಮೊದಲ ಬಾರಿಗೆ ನಷ್ಟದಲ್ಲಿದೆ ಟಾಟಾ ಕಂಪನಿ: ಷೇರುಗಳನ್ನು ಖರೀದಿಸಬೇಕೋ? ಮಾರಾಟ ಮಾಡಬೇಕೋ?

    ಮುಂಬೈ: ಟಾಟಾ ಗ್ರೂಪ್ ಕಂಪನಿ ಟಾಟಾ ಕೆಮಿಕಲ್ಸ್ ತನ್ನ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು ದೊಡ್ಡ ನಷ್ಟವನ್ನು ಅನುಭವಿಸಿದೆ. ಅಂದಾಜು 9 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂಸ್ಥೆಯು ನಷ್ಟ ಅನುಭವಿಸಿದೆ.

    ಟಾಟಾ ಕೆಮಿಕಲ್ಸ್ ಜನವರಿ-ಮಾರ್ಚ್ 2024 ರ ತ್ರೈಮಾಸಿಕದಲ್ಲಿ 850 ಕೋಟಿ ರೂಪಾಯಿ ನಷ್ಟವನ್ನು ವರದಿ ಮಾಡಿದೆ, ಹಿಂದಿನ ವರ್ಷದ ಅವಧಿಯಲ್ಲಿ 709 ಕೋಟಿ ರೂಪಾಯಿ ಲಾಭ ಮಾಡಿತ್ತು. ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ 21.1 ರಷ್ಟು ಕುಸಿದು 3,475 ಕೋಟಿ ರೂ. ಆಗಿದೆ.

    ಈ ಸುದ್ದಿಯ ನಂತರ, ಟಾಟಾ ಕೆಮಿಕಲ್ಸ್ ಷೇರುಗಳ ಬೆಲೆ 4% ಕ್ಕಿಂತ ಹೆಚ್ಚು ಕುಸಿತ ಕಂಡಿತು. ಈ ವಾತಾವರಣದ ನಡುವೆ, ದೇಶೀಯ ಬ್ರೋಕರೇಜ್ ಸಂಸ್ಥೆಯು ಟಾಟಾ ಕೆಮಿಕಲ್ಸ್ ಷೇರುಗಳ ಗುರಿ ಬೆಲೆಯನ್ನು ಕಡಿಮೆ ಮಾಡಿದೆ. ಟಾಟಾ ಕೆಮಿಕಲ್ಸ್ ಷೇರುಗಳ ಬೆಲೆ ಒಂದು ವರ್ಷದಲ್ಲಿ 13% ಏರಿಕೆ ಕಂಡಿವೆ. ಆದರೆ, 2024ರಲ್ಲಿ ಇದುವರೆಗೆ ಈ ಷೇರು ಬೆಲೆ 4.21% ರಷ್ಟು ಕುಸಿದಿದೆ.

    ದೇಶೀಯ ಬ್ರೋಕರೇಜ್ ಏನು ಹೇಳಿದೆ?:

    ದೇಶೀಯ ಬ್ರೋಕರೇಜ್ ಸಂಸ್ಥೆಯಾದ ಕೋಟಕ್ ಇನ್​ಸ್ಟಿಟ್ಯೂಷನಲ್​ ಇಕ್ವಿಟಿ ಪ್ರಕಾರ, ಟಾಟಾ ಕೆಮಿಕಲ್ಸ್‌ನ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಗಳಿಕೆಯ ಕುಸಿತದ ಹೊರತಾಗಿಯೂ ಷೇರುಗಳು ಉತ್ತಮ ಪ್ರದರ್ಶನ ನೀಡಿವೆ. ಟಾಟಾ ಸನ್ಸ್‌ನ ಐಪಿಒ ನಿರೀಕ್ಷೆಯಲ್ಲಿ ಬಹುಶಃ ಹೂಡಿಕೆದಾರರ ಆಸಕ್ತಿ ಹೆಚ್ಚಿರಬಹುದು ಎಂದು ಬ್ರೋಕರೇಜ್ ಹೇಳಿದೆ. ಈಗ ಸ್ವಲ್ಪ ಭರವಸೆ ಇದ್ದಂತಿದೆ. ಬ್ಯಾಟರಿ ರಾಸಾಯನಿಕಗಳಲ್ಲಿ ಪ್ರಮುಖ ವಿಸ್ತರಣೆಯ ಯಾವುದೇ ನಿರೀಕ್ಷೆಗಳು ತಪ್ಪಾಗಿ ಕಂಡುಬರುತ್ತವೆ ಎಂದು ಕೋಕ್ ಇಕ್ವಿಟೀಸ್ ಹೇಳಿದೆ.

    ಷೇರಿನ ಗುರಿ ಬೆಲೆ?:

    ಬ್ರೋಕರೇಜ್ ಸಂಸ್ಥೆಯು ಈ ಷೇರುಗಳ ಮೇಲೆ ‘ಮಾರಾಟ’ ರೇಟಿಂಗ್ ಅನ್ನು ಉಳಿಸಿಕೊಂಡಿದೆ. ಟಾಟಾ ಕೆಮಿಕಲ್ಸ್ ಷೇರಿನ ಗುರಿ ಬೆಲೆಯನ್ನು ಹಿಂದಿನ ರೂ. 780 ರಿಂದ ರೂ. 770 ಕ್ಕೆ ಇಳಿಸಿದೆ. ಮತ್ತೊಂದು ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್, ತಟಸ್ಥ ರೇಟಿಂಗ್‌ನೊಂದಿಗೆ ರೂ 980 ಗುರಿ ಬೆಲೆಯನ್ನು ನೀಡಿದೆ. ಪ್ರಸ್ತುತ ಷೇರಿನ ಬೆಲೆ ರೂ. 1070 ರ ಮಟ್ಟದಲ್ಲಿದೆ.

    ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದರೆ ಸೋಲಾರ್ ಷೇರುಗಳಿಗೆ ಭರ್ಜರಿ ಡಿಮ್ಯಾಂಡು: ಈ 4 ಸ್ಟಾಕ್​ ಖರೀದಿಸಲು ತಜ್ಞರ ಸಲಹೆ

    ರೂ. 1633 ಅಗ್ಗವಾಯ್ತು ಚಿನ್ನದ ಬೆಲೆ; ಬೆಳ್ಳಿ ದರ ಕೂಡ 3585 ರೂ. ಇಳಿಕೆ: ಬಂಗಾರದ ಬೆಲೆ ಕುಸಿತಕ್ಕೆ ಕಾರಣವೇನು?

    137 ರಿಂದ 19 ರೂಪಾಯಿಗೆ ಕುಸಿದ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ಹೂಡಿಕೆದಾರರು ಈಗ ಮುಗಿಬಿದ್ದು ಖರೀದಿಸುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts