More

  ಸಮಂತಾಗೆ ಅದು ಮೊದಲೇ ಗೊತ್ತಿತ್ತಾ? ಅದಕ್ಕಾಗಿಯೇ ನಾಗಚೈತನ್ಯಗೆ ವಿಚ್ಛೇದನ ನೀಡಿದಳಾ?

  ಹೈದರಾಬಾದ್​: ಪ್ರೀತಿಸಿ ಮದುವೆಯಾಗಿ, ಅಷ್ಟೇ ಬೇಗ ವಿಚ್ಛೇದನ ಪಡೆದ ತಾರಾಜೋಡಿ ಟಾಲಿವುಡ್ ನ ಸಮಂತಾ ಮತ್ತು ನಾಗ ಚೈತನ್ಯ. ಈ ದಂಪತಿ ದೂರಾಗಿದ್ದರೂ ಏನೇನೋ ಸುದ್ದಿಗಳು ಬರುತ್ತಲೇ ಇರುತ್ತಿವೆ. ಇದೇ ನಿಟ್ಟಿನಲ್ಲಿ ಅವರ ವಿಚ್ಛೇದನದ ಕಾರಣ ಇತ್ತೀಚೆಗೆ ಹೊರಬಿದ್ದಿದೆ.

  ಇದನ್ನೂ ಓದಿ: ಸ್ವಾತಿ ಮಲಿವಾಲ್ ಹಲ್ಲೆ ಕೇಸ್‌ಗೆ ಬಿಗ್‌ ಟ್ವಿಸ್ಟ್! ಸಿಎಂ ಕೇಜ್ರಿವಾಲ್ ನಿವಾಸದ ವಿಡಿಯೋ ವೈರಲ್ !

  ಒಳ್ಳೆಯ ಫ್ರೆಂಡ್ಸ್ ಆಗಿದ್ದ ಇವರಲ್ಲಿ ‘ಆಟೋನಗರ ಸೂರ್ಯ’ ಸಿನಿಮಾ ಮಾಡುವಾಗ ಪ್ರೀತಿ ಹುಟ್ಟಿತು. ಬಹಳ ದಿನಗಳ ಬಳಿಕ ಹಿರಿಯರ ಮನವೊಲಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು.

  ಆ ನಂತರ ಫುಲ್ ಎಂಜಾಯ್ ಮಾಡುತ್ತಾ ತುಂಬಾ ಕ್ರೇಜಿಯಾಗಿ ಕಾಲ ಕಳೆದಿದ್ದಾರೆ ಈ ತಾರಾಜೋಡಿ. ಅದೇ ಸಮಯದಲ್ಲಿ ಚಿತ್ರರಂಗದಲ್ಲೂ ಯಶಸ್ಸನ್ನು ಸಾಧಿಸಿದರು. ಆದರೆ ನಾಲ್ಕು ವರ್ಷ ದಾಂಪತ್ಯ ನಡೆಸಿ, ಬೆಸ್ಟ್​ ಜೋಡಿ ಎಂಬ ಖ್ಯಾತಿಗಳಿಸಿದ್ದ ಇವರು ಡಿವೋರ್ಸ್​ ಪಡೆದು ಬೇರ್ಪಟ್ಟರು.

  ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದು ಬಹಳ ದಿನಗಳಾಗಿವೆ. ಆದರೆ ಅವರ ಪ್ರತ್ಯೇಕತೆಯ ಹಿಂದಿನ ಕಾರಣ ನಿಗೂಢವಾಗಿದೆ.

  ನಿಜವಾಗಿ ಅವರಿಬ್ಬರ ನಡುವೆ ಯಾವ ವಿಷಯಗಳಲ್ಲಿ ಘರ್ಷಣೆಗಳಿದ್ದವು? ಎಂಬ ಅನುಮಾನಕ್ಕೆ ಸ್ಪಷ್ಟತೆ ಬಂದಿಲ್ಲ . ಇದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಇದನ್ನೇ ಹಾಟ್ ಟಾಪಿಕ್ ಮಾಡುತ್ತಿದ್ದಾರೆ.

  ಹೀಗಿರುವಾಗ ಇತ್ತೀಚೆಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇದರ ಪ್ರಕಾರ, ನಾಗ ಚೈತನ್ಯ ಪ್ರೀತಿ ಮಾಡುವ ಮೊದಲು ಸಮಂತಾಗೆ ಮಯೋಸಿಟಿಸ್ ಇರುವುದು ಪತ್ತೆಯಾಯಿತು. ಇದರಿಂದ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿ ಸಮಂತಾ ವಿಚ್ಛೇದನಕ್ಕೆ ಮುಂದಾದಳು ಎಂದು ತಿಳಿದುಬಂದಿದೆ. ಅದೇನೆಂದರೆ.. ಸಮಂತಾ ಮತ್ತು ನಾಗ ಚೈತನ್ಯ ಅನಾರೋಗ್ಯದಿಂದ ಬೇರ್ಪಟ್ಟಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ ಸಾರಾಂಶ.

  ಗುಂಡಿನ ದಾಳಿಗೆ ಒಳಗಾಗಿದ್ದ ಸ್ಲೋವಾಕಿಯಾದ ಪ್ರಧಾನಿ ಫಿಕೋ ಸ್ಥಿತಿ ಸ್ಥಿರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts