More

    ಸ್ವಾತಿ ಮಲಿವಾಲ್ ಹಲ್ಲೆ ಕೇಸ್‌ಗೆ ಬಿಗ್‌ ಟ್ವಿಸ್ಟ್! ಸಿಎಂ ಕೇಜ್ರಿವಾಲ್ ನಿವಾಸದ ವಿಡಿಯೋ ವೈರಲ್ !

    ನವದೆಹಲಿ: ಎಎಪಿ ರಾಜ್ಯ ಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ಅವರ ಆಪ್ತ ವಿಭವ್ ಕುಮಾರ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಸ್ವಾತಿ ಮಲಿವಾಲ್ ಜೊತೆ ಅನುಚಿತ ವರ್ತನೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿಡಿಯೋ ಹೊರಬಿದ್ದಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟಕ್ಕೆ 300, ಎನ್​ಡಿಎಗೆ ಕೇವಲ 200 ಸ್ಥಾನ: ಡಿಕೆಶಿ ಭವಿಷ್ಯ

    ವೈರಲ್ ಆಗಿರುವ ವಿಡಿಯೋ ಮೇ 13ನೇ ತಾರೀಖಿನದ್ದಾಗಿದ್ದು, ಕೇಜ್ರಿವಾಲ್ ನಿವಾಸದ ಒಳಗೆ ಸೆರೆಯಾದ ದೃಶ್ಯಗಳಿವೆ ಎನ್ನಲಾಗುತ್ತಿದೆ. ಅದರ ಪ್ರಕಾರ, ಸ್ವಾತಿ ಸಿಎಂ ಇರುವ ಕೋಣೆಯಲ್ಲೇ ಕುಳಿತಿದ್ದು, ಆಗ ಅಲ್ಲಿನ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಹೋಗುವಂತೆ ಎಚ್ಚರಿಕೆ ನೀಡುತ್ತಿರುವುದು ಕಂಡು ಬಂದಿದೆ.

    ಈ ಸಂದರ್ಭ ಕೇಜ್ರಿವಾಲ್​ ನಿವಾಸದ ಭದ್ರತಾ ಸಿಬ್ಬಂದಿ ಮತ್ತು ಮಲಿವಾಲ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಆಗ ಸ್ವಾತಿ, ‘ನಾನು ಈಗಷ್ಟೇ 112ಕ್ಕೆ ಕರೆ ಮಾಡಿದ್ದೇನೆ, ಪೊಲೀಸರು ಬರಲಿ, ನಂತರ ಮಾತನಾಡೋಣ ಎಂದು ಹೇಳುತ್ತಾರೆ. ಆಗ ಸಿಬ್ಬಂದಿ, ಪೊಲೀಸರು ಹೊರಗೆ ಬರುತ್ತಾರೆ, ಇಲ್ಲಿಗೆ ಬರುವುದಿಲ್ಲ ಅಲ್ಲೇ ಹೋಗಿ ಎಂದು ಹೇಳಿದ್ದಾರೆ. ಆಗ ಪರಸ್ಪರ ವಾಕ್ಸಮರ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

    ಸ್ವಾತಿ ಮಲಿವಾಲ್‌ಗೆ ಸಂಬಂಧಿಸಿದ ಸಿಎಂ ಕೇಜ್ರಿವಾಲ್ ನಿವಾಸದ ವಿಡಿಯೋ ಹೊರಬಿದ್ದ ಬೆನ್ನಲ್ಲೇ ದೆಹಲಿ ಪೊಲೀಸರು ಸಹ ಇದಕ್ಕೆ ಪ್ರತಿಕ್ರಿಯಿಸಿದ್ದು, ವೈರಲ್ ಆಗಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನು ಯಾರು ಮಾಡಿದ್ದಾರೆ? ಆಗ ಅಲ್ಲಿದ್ದವರು ಬೇರೆ ವಿಡಿಯೋಗಳನ್ನು ಸಹ ಮಾಡಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    https://x.com/rupashreenanda/status/1791382484955140099

    ಈ ವಿಡಿಯೋ ಕೆಲವೇ ಸೆಕೆಂಡ್‌ಗಳದ್ದು, ಅಂದು ಸಿಎಂ ಭವನಕ್ಕೆ ಎಷ್ಟು ಮಂದಿ ತೆರಳಿದ್ದರೋ ಅವರ ಹಾಜರಾತಿ ದಾಖಲಿಸಿ ಪರಿಶೀಲಿಸಲಾಗುವುದು. ಆ ಸಮಯದಲ್ಲಿ ಡ್ರಾಯಿಂಗ್ ರೂಮ್‌ನಲ್ಲಿದ್ದ ಎಲ್ಲ ಜನರ ಮೊಬೈಲ್ ಫೋನ್‌ಗಳನ್ನು ಸಹ ತನಿಖೆಗೆ ತೆಗೆದುಕೊಳ್ಳಬಹುದು. ಇದಲ್ಲದೇ ಕಾಯುವ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ನೀಡಿದ ದೂರಿನ ಮೇರೆಗೆ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್‌ ಕುಮಾರ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

    ಮೇ 13 ರಂದು ಸ್ವಾತಿ ಮಲಿವಾಲ್ ತಮ್ಮ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದರು. ತಾನು ಡ್ರಾಯಿಂಗ್ ರೂಮಿನಲ್ಲಿ ಕಾಯುತ್ತಿದ್ದಾಗ ಬಿಭವ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಸ್ವಾತಿ ದೂರಿನಲ್ಲಿ ಹೇಳಿದ್ದಾರೆ.

    ವಿಮಾನದಿಂದ ಇಳಿದ ವ್ಯಕ್ತಿಗೆ ಕಾದಿತ್ತು ಬಿಗ್​ ಶಾಕ್..ಜೀವ ಉಳಿದಿದ್ದೇ ಪವಾಡ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts