More

    ರುಚಿಕಟ್ಟಾದ ಹಣ್ಣು ಪಡೆಯಲು ಬಾಳೆಗೊನೆಯನ್ನು ಮಾಗಿಸುವ ನೈಸರ್ಗಿಕ ವಿಧಾನ: ಅಜ್ಜಿಯ ವಿಡಿಯೋ ವೈರಲ್​

    ಮುಂಬೈ: ಬಾಳೆಗೊನೆಯಲ್ಲಿನ ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣಾಗಿಸುವ ಈ ಅಜ್ಜಿಯ ವಿಧಾನವು ಅಚ್ಚರಿಗೊಳಿಸುವಂತಿದೆ. ಈ ಕುರಿತು ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ,

    ಬಾಳೆಹಣ್ಣುಗಳು ಪೋಷಕಾಂಶಗಳಿಂದ ತುಂಬಿರುವ ಅದ್ಬುತ ಹಣ್ಣು, ಆದರೆ, ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬಾಳೆಯನ್ನು ಹಣ್ಣಾಗಿಸಲು ರಾಸಾಯನಿಕವನ್ನು ಬಳಸುವುದರಿಂದ ಆರೋಗ್ಯಕ್ಕೆ ಮಾರಕವಾಗುವ ಆತಂಕವೂ ಮನೆ ಮಾಡಿದೆ.

    ಆದರೆ, ಈಗ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ವಯಸ್ಸಾದ ಮಹಿಳೆಯೊಬ್ಬರು ಕೇವಲ ಎರಡು ದಿನಗಳಲ್ಲಿ ಬಾಳೆಕಾಯಿಗಳನ್ನು ಹೇಗೆ ಚೆನ್ನಾಗಿ ಹಣ್ಣಾಗಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯಾವುದೇ ರಾಸಾಯನಿಕ ಬಳಸದೆಯೇ ನೈಸರ್ಗಿಕವಾಗಿ ಹಣ್ಣು ಮಾಡುವುದಿಂದ ರುಚಿಯೂ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯಾವುದೇ ರಾಸಾಯನಿಕಗಳಿಲ್ಲದೆ ಬಾಳೆಹಣ್ಣನ್ನು ಚೆನ್ನಾಗಿ ಮಾಗಿಸಬಹುದು ಎಂದು ಹೇಳಲಾಗಿದೆ. ಬಾಳೆಹಣ್ಣುಗಳು ಮರದ ಮೇಲೆ ಹಣ್ಣಾಗಲು ಸಮಯ ತೆಗೆದುಕೊಳ್ಳುತ್ತದೆ. ಬಾಳೆಗಿಡ ಚಿಗುರೊಡೆಯುವ ಸಮಯದಿಂದ ಸಂಪೂರ್ಣವಾಗಿ ಹಣ್ಣಾಗುವವರೆಗೆ ಮತ್ತು ಕಟಾವು ಮಾಡುವವರೆಗೆ 100-120 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ಗಿಡದಲ್ಲಿಯೇ ಮಾಗಿದ ಬಾಳೆಹಣ್ಣುಗಳು ದೀರ್ಘಕಾಲ ಇಡಲಾಗುವುದಿಲ್ಲ. ಆದರೆ, ಬಾಳಿಕಾಯಿಗಳನ್ನು ವಾರಗಳವರೆಗೆ ಇಡಬಹುದು.

    ಬಾಳೆಕಾಯಿ ಗೊನೆಯನ್ನು ಹೂಳಲು ಮೊದಲು ನೆಲದಲ್ಲಿ ಗುಂಡಿ ತೋಡಬೇಕು ಎನ್ನುತ್ತಾರೆ ದಕ್ಷಿಣ ಭಾರತದ ಈ ಅಜ್ಜಿ. ಅದರ ನಂತರ, ಬಾಳೆ ಗೊನೆಯನ್ನು ಇಟ್ಟು ಕಲ್ಲಿದ್ದಲು ಹೊತ್ತಿಸಿ ಗುಂಡಿಯ ಒಳಗೆ ಹೊಗೆ ಹಾಕಬೇಕು. ತಕ್ಷಣವೇ. ಕೆಲವು ಒಣ ಬಾಳೆ ಎಲೆಗಳ ಮೂಲಕ ಗುಂಡಿ ಮೇಲ್ಭಾಗ ಮುಚ್ಚಬೇಕು. ಅದರ ಮೇಲೆ ಮಣ್ಣನ್ನು ಹಾಕಿ ಮುಚ್ಚಬೇಕು. ಎರಡು ದಿನಗಳ ನಂತರ ಹೊರತೆಗೆದರೆ ಬಾಳೆಗೊನೆಯಲ್ಲಿ ಮಾಗಿದ ಹಣ್ಣುಗಳು ಲಭಿಸುತ್ತವೆ.

    ಚುನಾವಣೆ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಏರಿಕೆಯಾಗಲಿದೆ; ಈಗ ಕುಸಿದಿರುವಾಗಲೇ ಖರೀದಿಸಿ: ಗೃಹ ಸಚಿವ ಅಮಿತ್ ಶಾ ಹೀಗೆ ಸಲಹೆ ನೀಡಿದ್ದೇಕೆ?

    ಸದ್ಯ ಕುಸಿತ ಕಂಡ ಟಾಟಾ ಷೇರು ಬೆಲೆ: 1250 ರೂಪಾಯಿ ಗುರಿಯೊಂದಿಗೆ ಖರೀದಿಸಲು 21 ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts