ವಿಮಾನದಿಂದ ಇಳಿದ ವ್ಯಕ್ತಿಗೆ ಕಾದಿತ್ತು ಬಿಗ್​ ಶಾಕ್..ಜೀವ ಉಳಿದಿದ್ದೇ ಪವಾಡ..!

flaight
Published on

ಬೊರ್ನಿಯೊ: ವಿಮಾನ ಪ್ರಯಾಣ ಸಮಯ ಉಳಿತಾಯ ಮತ್ತು ಸುರಕ್ಷತೆ ದೃಷ್ಟಿಯಿಂದ ಗಮನಸೆಳೆಯುತ್ತದೆ. ಆದರೆ ಇದು ಕೆಲವೊಮ್ಮೆ ಅಪಾಯಕಾರಿಯೂ ಆಗಬಹುದು. ಸಣ್ಣ ಅಜಾಗರೂಕ ತಪ್ಪುಗಳು ಮಾರಕವಾಗಿ ಪ್ರಾಣಕ್ಕೇ ಸಂಚಕಾರ ತರಬಹುದು. ಹೀಗಾಗಿಯೇ ವಿಮಾನ ಟೇಕ್ ಆಫ್ ಆಗುವ ಮುನ್ನ ಸಿಬ್ಬಂದಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಂದಿ ವೀಡಿಯೋ ವೈರಲ್ ಆಗಿದ್ದು, ವೀಡಿಯೊದಲ್ಲಿ ಒಂದು ಸಣ್ಣ ತಪ್ಪಿನಿಂದಾಗಿ ವ್ಯಕ್ತಿಯೊಬ್ಬರು ದೊಡ್ಡ ಅಪಘಾತವನ್ನು ಎದುರಿಸಬೇಕಾಯಿತು.

ಇಂಡೋನೇಷ್ಯಾದ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ ಸಿಬ್ಬಂದಿಯ ತಪ್ಪಿನಿಂದ ವ್ಯಕ್ತಿಯೊಬ್ಬರು ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ. ಜಕಾರ್ತಾ ವಿಮಾನ ನಿಲ್ದಾಣದಲ್ಲಿ ಏರ್‌ಬಸ್ A320 ನಿರ್ಗಮನಕ್ಕೆ ಸಿದ್ಧವಾಗಿತ್ತು. ಎಲ್ಲ ಸಿದ್ಧತೆಗಳು ಬಹುತೇಕ ಮುಗಿದಿದ್ದವು. ಇದರಿಂದಾಗಿ ವಿಮಾನಯಾನ ಸಂಸ್ಥೆಯ ಗ್ರೌಂಡ್ ಸ್ಟಾಫ್ ವಿಮಾನದ ಏಣಿಯನ್ನು ಬದಿಗೆ ಸರಿಸುತ್ತಿದ್ದಾರೆ. ಈ ವಿಚಾರವನ್ನು ಗಮನಿಸದ ಉದ್ಯೋಗಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಲೇ ವಿಮಾನದಿಂದ ಮುಂದೆ ಸಾಗಿ ಬಾಗಿನಲಿನಿಂದ ಹೊರ ಬಂದಿದ್ದು, ಏಣಿ ಸಿಗದೆ ಕೆಳಗೆ ಜಾರಿ ಬಿದ್ದಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

@sjlazars ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊವನ್ನು ಇದುವರೆಗೆ 1.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಲಾಗಿದೆ. ಏತನ್ಮಧ್ಯೆ, ಈ ಘಟನೆಯಲ್ಲಿ ಗಾಯಗೊಂಡ ಉದ್ಯೋಗಿ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net