More

    ನೆಮ್ಮದಿ ಬದುಕಿಗೆ ಪುರಾಣ-ಪ್ರವಚನ ಪೂರಕ

    ಯಲಬುರ್ಗಾ: ಪ್ರತಿಯೊಬ್ಬರೂ ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಎನ್.ಜರಕುಂಟಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೋತ್ಸವ ಅಂಗವಾಗಿ 21 ದಿನಗಳ ಕಾಲ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

    ಇದನ್ನು ಓದಿ: ಯಕ್ಷಕಲೆಯಲ್ಲಿ ಪುರಾಣದ ಕಥಾನಕಗಳು ವ್ಯವಸ್ಥಿತವಾಗಿ ಪ್ರತಿಫಲನ

    ನೆಮ್ಮದಿಯ ಬದುಕಿಗೆ ಪುರಾಣ ಪ್ರವಚನ ಪೂರಕವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಹಬ್ಬ ಹರಿದಿನಗಳು ಸಾಮರಸ್ಯ ಮೂಡಿಸುತ್ತವೆ. ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ದಾಂಪತ್ಯಕ್ಕೆ ಕಾಲಿಟ್ಟ ಸತಿ-ಪತಿಗಳು ಮಾದರಿ ಜೀವನ ನಡೆಸಬೇಕು ಎಂದರು.

    ಬೆಳಗ್ಗೆ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ, ಗೋಪುರಕ್ಕೆ ಕಳಸಾರೋಹಣ, ರುದ್ರಾಭಿಷೇಕ, ವಿಶೇಷ ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ನಡೆದವು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಕುಂಭ, ಕಳಸ ಹಾಗೂ ಸಕಲ ವಾದ್ಯಮೇಳದೊಂದಿಗೆ ಶರಣಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು.

    ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. 6 ಜೋಡಿ ಸಾಮೂಹಿಕ ವಿವಾಹ ನಡೆದವು.
    ಮಕ್ಕಳ್ಳಿಯ ಶಿವಾನಂದಮಠದ ಶ್ರೀ ಶಿವಾನಂದ ಸ್ವಾಮೀಜಿ, ಗ್ರಾಪಂ ಸದಸ್ಯ ಬಸವರಾಜ ಹಳ್ಳಿಕೇರಿ, ಗಣ್ಯರಾದ ಅಲ್ಲಾಸಾಹೇಬ್ ನದಾಫ್, ಪರಶುರಾಮ ಕುದರಿಮೋತಿ, ಕಳಕಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಶಿವನಗೌಡ ಗೌಡ್ರ, ಯಲ್ಲನಗೌಡ ಗೌಡ್ರ, ಮುತ್ತಪ್ಪ ಜಕ್ಕಲಿ, ಮುತ್ತು ಬುಡ್ಡನ ಗೌಡ್ರ, ಮಾರುತಿ ಜಕ್ಕಲಿ, ಶರಣಪ್ಪ ಮಾಟಲದಿನ್ನಿ, ಮುತ್ತನಗೌಡ ಮಾಲಿಪಾಟೀಲ್, ಮಲ್ಲನಗೌಡ ಬಿಸನಾಳ, ಹನುಮಪ್ಪ ಬಳ್ಳಾರಿ, ಯಮನೂರಪ್ಪ ಗಾಣಧಾಳ, ಮಹೇಶ ಜಕ್ಕಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts