More

    ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳುಸುದ್ದಿ ಹಾಗೂ ಅಪಪ್ರಚಾರ ಕೂಡ ಚುನಾವಣಾ ಕಾರ್ಯತಂತ್ರವಾಗಿ ಪರಿಗಣಿಸಿದ್ದು, ಕೆಲವು ಅಂಥ ಸುಳ್ಳುಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ, ಗೊಂದಲ ಸೃಷ್ಟಿಸಿವೆ. ಆ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಸಿಕ್ಕಿಬಿದ್ದಿದ್ದು, ಬಂಧನವಾಗಿದೆ.

    ಇದನ್ನೂ ಓದಿ: ಮನೆಯಿಂದಲೇ ಮತದಾನ: ನೋಂದಣಿ ಮಾಡಿಕೊಂಡಿದ್ದ 140 ಮಂದಿ ಸಾವು!

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಸುಳ್ಳುಸುದ್ದಿ ಸೃಷ್ಟಿಸಿ ವೈರಲ್ ಮಾಡಿದ ವಿಚಾರವಾಗಿ ಮೈಸೂರಿನ ಯುವಕ ದಿಲೀಪ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ನೀಡಿದ ದೂರಿ‌ನ ಮೇರೆಗೆ ದಿಲೀಪ್ ಗೌಡನನ್ನು ಮೈಸೂರು ನಗರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

     ಇದನ್ನೂ ಓದಿ: ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಪತ್ರಿಕೆಯೊಂದರ ಸುದ್ದಿಯನ್ನು ಹೋಲುವ ರೀತಿಯಲ್ಲಿ ವಿನ್ಯಾಸ ಮಾಡಿ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದ ದಿಲೀಪ್​, ಬಿ.ಎಲ್. ಸಂತೋಷ್ ಅವರು ಲಿಂಗಾಯತ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದರು ಎಂದು ಬಿಂಬಿತವಾಗುವಂತೆ ಮಾಡುವ ಪ್ರಯತ್ನ ಮಾಡಿದ್ದ. ಆದರೆ ಕೊನೆಗೂ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಇದೇ ರೀತಿ ಸುಳ್ಳುಸುದ್ದಿ ಸೃಷ್ಟಿಸುವವರಿಗೆ ಇದೊಂದು ರೀತಿಯಲ್ಲಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts