More

    ಮನೆಯಿಂದಲೇ ಮತದಾನ: ನೋಂದಣಿ ಮಾಡಿಕೊಂಡಿದ್ದ 140 ಮಂದಿ ಸಾವು!

    ಬೆಂಗಳೂರು: ಮತ ಚಲಾಯಿಸಿದ ಬೆನ್ನಿಗೇ ಇಬ್ಬರು ಸಾವಿಗೀಡಾದ್ದನ್ನು ಎರಡು ದಿನಗಳ ಹಿಂದೆ ಕೇಳಿದ್ದೆವು. ಈ ಮಧ್ಯೆ ಮತದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದ 140 ಮಂದಿ ಮತ ಚಲಾಯಿಸುವ ಮೊದಲೇ ಸಾವಿಗೀಡಾದ ಪ್ರಕರಣ ನಡೆದಿದೆ.

    ಎಂಬತ್ತು ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದ್ದು, ಅದಕ್ಕಾಗಿ ಇತ್ತೀಚೆಗೆ ನೋಂದಣಿ ಆರಂಭಿಸಿತ್ತು. ಆ ಪ್ರಕಾರ ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೆ 80 ವರ್ಷ ಮೇಲ್ಪಟ್ಟ 8,519 ಮಂದಿ ಮತದಾನ ಮಾಡಿದ್ದಾರೆ.

    ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ನಗರದಲ್ಲಿರುವ 80 ವರ್ಷ ಮೇಲ್ಪಟ್ಟ 2,35,140 ಮತದಾರರ ಪೈಕಿ 9,152 ಮಂದಿ ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 8,519 ಮಂದಿ ಮತದಾನ ಮಾಡಿದ್ದಾರೆ. ಆದರೆ, ಮತದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದ 140 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ 97 ಮಂದಿ ಮತದಾನಕ್ಕೆ ನಿರಾಕರಿಸಿದರೆ, 390 ಮಂದಿ ಮತದಾನಕ್ಕೆ ದೊರೆಯಲಿಲ್ಲ. ಅದೇ ರೀತಿ, 119 ಮಂದಿ ಅಂಗವಿಕಲರ ಪೈಕಿ 112 ಮಂದಿ ಮನೆಯಿಂದಲೇ ಗೌಪ್ಯ ಮತದಾನ ಮಾಡಿದ್ದಾರೆ. ಅವಶ್ಯಕ ಸೇವೆಗಳ ಗೈರು ಇಲಾಖೆಗಳಡಿ 567 ಮಂದಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿದ್ದಾರೆ.

    ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಕಳೆದುಕೊಂಡು ನಿಮ್ಹಾನ್ಸ್​ಗೆ ಹೋದ ಉದ್ಯಮಿ!

    ಏ.29ರಿಂದ ಮೇ 6ರವರೆಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವೀಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡ ಗುರುತಿನ ಚೀಟಿ ಪರಿಶೀಲಿಸಿತ್ತು. ಬಳಿಕ ಗೌಪ್ಯ ಮತದಾನಕ್ಕೆ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಎಲ್ಲ ಪ್ರಕ್ರಿಯೆಯನ್ನು ವೀಡಿಯೊದಲ್ಲಿ ಸೆರೆ ಇಡಲಾಗಿದೆ. ಯಾವುದೇ ತೊಂದರೆ ಹಾಗೂ ಅಡೆತಡೆ ಇಲ್ಲದೆ ಎಲ್ಲ ಕಡೆಗಳಲ್ಲಿ ಸುಸೂತ್ರವಾಗಿ ಮತದಾನ ನಡೆಯಿತು.

    ಇದನ್ನೂ ಓದಿ: ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಮೇ 2ರಿಂದ ಮೇ 4ರವರೆಗೆ ಅವಶ್ಯಕ ಸೇವೆಗಳ ಗೈರು ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತು. ‘12ಡಿ’ಅರ್ಜಿ ಸಲ್ಲಿಸಿ ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮತದಾರರು ನೋಂದಾಯಿಸಿದ್ದರು. ಇವೆರಲ್ಲರೂ ಪೋಸ್ಟಲ್ ವೋಟಿಂಗ್ ಸೆಂಟರ್‌ಗಳಿಗೆ (ಪಿವಿಸಿ) ಆಗಮಿಸಿ ಮತ ಚಲಾಯಿಸಿದ್ದರು.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts