'ಬಿಜೆಪಿಗೆ ಮೋದಿಯಿದ್ದಂತೆ, ಕಾಂಗ್ರೆಸ್​ಗೆ ರಾಹುಲ್​ ಗಾಂಧಿ; ರಾಹುಲ್​ನ್ನು ಕಂಡರೆ ಕೇಂದ್ರದ ನಾಯಕರು ಹೆದರುತ್ತಾರೆ'

Rahul Gandhi
Published on

ಮುಂಬೈ: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕಿನ್ನೂ ತೆರೆ ಬಿದ್ದಿಲ್ಲ. ರಾಹುಲ್​ ಗಾಂಧಿ ಅಥವಾ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಹಾಗಿರುವಾಗಲೇ ಶಿವಸೇನೆಯು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧೀಗೆ ಹೊಗಳಿಕೆಯ ಸರಮಾಲೆಯನ್ನೇ ತೊಡಿಸಿದ್ದು, ಅವರೇ ಅಧ್ಯಕ್ಷರಾಗಬೇಕೆಂಬ ಇಂಗಿತ ತೋಡಿಕೊಂಡಿದೆ.

ಶಿವಸೇನೆಯ ಸಮನಾ ಪತ್ರಿಕೆಯ ಸಂಪಾದಕೀಯ ಅಂಕಣವನ್ನು ರಾಹುಲ್​ ಗಾಂಧಿ ಹೊಗಳಿಕೆಗೇ ಮೀಸಲಿಡಲಾಗಿದೆ. "ಬಿಜೆಪಿಯಲ್ಲಿ ಮೋದಿ ಹೇಗೋ, ಕಾಂಗ್ರೆಸ್​ನಲ್ಲಿ ರಾಹುಲ್​ ಗಾಂಧಿ ಹಾಗೇ. ಅವರು ಕೇಂದ್ರ ಸರ್ಕಾರದ ವಿರುದ್ಧದ ನಿಜವಾದ ಹೋರಾಟಗಾರ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಒಬ್ಬ ವ್ಯಕ್ತಿ ಹೋರಾಟಡಿದರೂ ಭಯ ಪಡುತ್ತಾರೆ. ಅದರಲ್ಲೂ ಹೋರಾಡುತ್ತಿರುವ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ ಭಯ ನೂರು ಪಟ್ಟಾಗುತ್ತದೆ. ಅಂತದ್ದೇ ಒಬ್ಬ ಹೋರಾಟಗಾರ ರಾಹುಲ್​ ಗಾಂಧಿ. ದೆಹಲಿಯಲ್ಲಿರುವ ನಾಯಕರಿಗೆ ರಾಹುಲ್​ ಗಾಂಧಿ ಕಂಡರೆ ಹೆಚ್ಚು ಭಯವಿದೆ" ಎಂದು ಸಂಪಾದಕೀಯ ಅಂಕಣದಲ್ಲಿ ಹೇಳಲಾಗಿದೆ.

ಕಾಂಗ್ರೆಸ್​ಗೆ ರಾಹುಲ್​ ಗಾಂಧಿ ಬಿಟ್ಟರೆ ಬೇರೊಬ್ಬ ಪರ್ಯಾಯ ವ್ಯಕ್ತಿ ಇಲ್ಲವೇ ಇಲ್ಲ. ಅವರನ್ನು ಅಪಹಾಸ್ಯ ಮಾಡಲಾಗುತ್ತದೆ. ಆದರೆ ಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ತಿರುಗಿ ಬೀಳುವುದು ಅವರು ಮಾತ್ರ. ಪಕ್ಷಕ್ಕೆ ಅಧ್ಯಕ್ಷ ಸ್ಥಾನಕ್ಕೆ ಅವರು ಏರಿದರೆ ಒಳಿತಾಗಲಿದೆ ಎಂದು ಶಿವಸೇನೆ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net