ಟ್ಯೂಷನ್​ ಕ್ಲಾಸ್​ಗೆ ಹೊರಟಿದ್ದ ಬಾಲಕಿಯ ಮೇಲೆ ಗ್ಯಾಂಗ್​ ರೇಪ್​! ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಬಾಲಕಿ

raoe
Published on

ಪಟನಾ: 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳು ಟ್ಯೂಷನ್​ ಕ್ಲಾಸ್​ಗೆ ತೆರಳುವ ವೇಳೆಯಲ್ಲಿ ಕಿಡ್ನಾಪ್​ ಮಾಡಿ, ಗ್ಯಾಂಗ್​ ರೇಪ್​ ನಡೆಸಿರುವ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ. ಪಾಳು ಬಂಗಲೆಯ ಕಿಟಕಿಯಿಂದ ಹೊರ ಹಾರಿದ ಹುಡುಗಿ ಅಪರಿಚಿತರ ಸಹಾಯದಿಂದ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ.

ಮುಜಾಫರ್​ನಗರದ ಸಕ್ರಾ ಪ್ರದೇಶದ ವಾಸಿ ಬಾಲಕಿ, ಜನವರಿ 4ರಂದು ಟ್ಯೂಷನ್​ ಕ್ಲಾಸ್​ಗೆಂದು ತನ್ನ ಸೈಕಲ್​ನಲ್ಲಿ ಹೊರಟಿದ್ದಳು. ಈ ಸಮಯದಲ್ಲಿ ಆಕೆಯ ಬಳಿ ಒಂದು ಬೊಲೆರೋ ಕಾರು ಮತ್ತೊಂದು ಬೈಕ್​ ಬಂದಿದೆ. ಬೊಲೆರೋ ಕಾರನ್ನು ಸೈಕಲ್​ಗೆ ತಾಕಿಸಲಾಗಿದ್ದು, ಬಾಲಕಿ ಮತ್ತು ಸೈಕಲ್​ ಕೆಳಗೆ ಬಿದ್ದಿದ್ದಾರೆ. ಆಗ ಬೈಕ್​​ನಲ್ಲಿದ್ದ ಒಬ್ಬ ವ್ಯಕ್ತಿ ಕೆಳಗಿಳಿದು ಬಾಲಕಿಗೆ ಕಾರನ್ನು ಹತ್ತಲು ಹೇಳಿದ್ದಾನೆ. ಅದಕ್ಕೆ ಆಕೆ ಒಪ್ಪದೆ ಚೀರಿಕೊಳ್ಳಲು ಮುಂದಾದಾಗ, ಬಾಯಿಗೆ ಬಟ್ಟೆ ತುರುಕಿ, ಮುಖವನ್ನು ಆಕೆ ತೊಟ್ಟಿದ್ದ ಸ್ಕಾರ್ಫ್​​ನಿಂದ ಮುಚ್ಚಿ, ಕಾರಳೊಗೆ ದೂಕಿದ್ದಾನೆ.

ಬಾಲಕಿಯನ್ನು ಕಾರಿನಲ್ಲಿ ಒಂದು ಪಾಳು ಬಂಗಲೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ಒಬ್ಬ ಕಾಮುಕ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಂಗಲೆಯೊಳಗೆ ಆಕೆಯನ್ನು ಕರೆದೊಯ್ದು ಪಿಸ್ತೂಲು ತೋರಿಸಿದ ಹೆದರಿಸಿ ಐವರು ಆಕೆಯ ಮೇಲೆ ಗ್ಯಾಂಗ್​ ರೇಪ್​ ನಡೆಸಿದ್ದಾರೆ. ಆಕೆಯನ್ನು ಕೂಡಿ ಹಾಕಿ, ಅವರೆಲ್ಲ ಹೊರಗೆ ಹೋಗಿದ್ದಾಗ, ಕಿಟಕಿಯಿಂದ ಬಾಲಕಿ ಹೊರ ಹಾರಿದ್ದಾಳೆ. ಅಲ್ಲಿಂದ ಓಡಿ ಬಂದು ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯ ಸಹಾಯದಿಂದ ಮನೆಯವರನ್ನು ಸಂಪರ್ಕಿಸಿದ್ದಾಳೆ. ಮನೆಯವರು ಸ್ಥಳಕ್ಕೆ ಬಂದು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ. ಮನೆಯಲ್ಲಿ ಬಾಲಕಿ ನಡೆದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ಅದಾದ ನಂತರ ಮಹಿಳಾ ಪೊಲೀಸ್​ ಠಾಣೆಗೆ ಆಕೆಯನ್ನು ಕರೆದೊಯ್ಯಲಾಗಿದ್ದು, ದೂರು ದಾಖಲಿಸಲಾಗಿದೆ. ಇಜಾರ್​, ಆದಿತ್ಯಾ ಝಾ ಸೇರಿ ಒಟ್ಟು ಐವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net