

ಕಲಬುರಗಿ: ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಅಣ್ಣ-ತಮ್ಮ ಇಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ದುರ್ಘಟನೆ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಸಂಭವಿಸಿದ್ದು, ಸಹೋದರರಾದ ಸುನೀಲ್ (17) ಮತ್ತು ಶೇಖರ್(12) ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ: ನವದಂಪತಿ ಸ್ಥಳದಲ್ಲೇ ಸಾವು
ಸಹೋದರರಿಬ್ಬ ಆತ್ಮಹತ್ಯೆ ಸುದ್ದಿ ಸುಳಿಯುತ್ತಿದ್ದ ಊರಿಗೆ ಊರೆ ಬಾವಿ ಬಳಿ ಬೀಡುಬಿಟ್ಟಿತ್ತು. ಹೆತ್ತವರು-ಕುಟುಂಬಸ್ಥರ ಗೋಳಾಟ ಮನಕಲಕುವಂತಿತ್ತು. ರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.