

ಬಳ್ಳಾರಿ: ಇತ್ತೀಚಿಗಷ್ಟೇ 54 ವರ್ಷ ವಯಸ್ಸಿನ ಫಾಸ್ಟರ್ ಜತೆ 24 ವರ್ಷದ ಯುವತಿ ನಾಪತ್ತೆಯಾಗಿದ್ದ ಪ್ರಕರಣ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿತ್ತು. ಅಲ್ಲದೆ ಯುವತಿ ಪಾಲಕರು ಮಗಳು ಕಾಣಿಸುತ್ತಿಲ್ಲ ಎಂದು ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದ್ದರು. ಇರ ಬೆನ್ನಲ್ಲೇ ಆ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಳು. ಇದೀಗ ಆಕೆ ತನಗಿಂತ 30 ವರ್ಷ ದೊಡ್ಡವನ ಜತೆ ಮದುವೆ ಆಗಿರುವ ಫೋಟೋಗಳು ವೈರಲ್ ಆಗಿವೆ.
ಡಿ.16 ರಂದು ನಗರದ ಗುಗ್ಗರಹಟ್ಟಿ ಪ್ರದೇಶದ ಇಂಜಿನಿಯರಿಂಗ್ ಪದವೀಧರೆ ಶ್ವೇತಾ ಎಂಬಾಕೆ ಲಿವಿಂಗ್ ವಾಟರ್ ಚರ್ಚ್ ಫಾಸ್ಟರ್ ರವಿಕುಮಾರ್ ಜತೆ ಪರಾರಿಯಾಗಿದ್ದಳು. ಮಗಳು ನಾಪತ್ತೆಯಾಗಿರುವ ಕುರಿತು ಡಿ.20ರಂದು ಆಕೆಯ ಪಾಲಕರು ದೂರು ನೀಡಿದ್ದರು. ಇದನ್ನೂ ಓದಿರಿ ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
‘ನಾನು ಚರ್ಚ್ಗೆ ಹೋಗುತ್ತಿದ್ದೆ. ನಾನು ಚರ್ಚ್ ಹೋಗೊದು ನನ್ನ ತಂದೆ-ತಾಯಿಗೆ ಇಷ್ಟ ಇರಲಿಲ್ಲ. ಈ ವಿಚಾರವಾಗಿ ನಮ್ಮ ಮನೆಯಲ್ಲಿ ಗಲಾಟೆ ಆಗಿತ್ತು. ಚರ್ಚ್ಗೆ ಬರದಂತೆ ತಡೆಯಬೇಕೆಂದು ಫಾಸ್ಟರ್ ಜತೆ ನನ್ನ ಪಾಲಕರು ಚರ್ಚಿಸಿದ್ದರು. ಆದರೂ, ನಾನು ಚರ್ಚ್ಗೆ ಹೋಗುವುದನ್ನು ಬಿಡಲಿಲ್ಲ. ನನ್ನನ್ನು ಮದುವೆಯಾಗುವಂತೆ ಫಾಸ್ಟರ್ ಬಳಿ ಕೇಳಿಕೊಂಡಿದ್ದರೂ ಅವರು ನಿರಾಕರಿಸಿದ್ದರು. ನನ್ನ ಬಲವಂತದ ಮೇರೆಗೆ ಫಾಸ್ಟರ್ ನನ್ನೊಂದಿಗೆ ಅಜ್ಞಾತ ಸ್ಥಳಕ್ಕೆ ಬಂದಿದ್ದಾರೆ. ನಾನು ಚರ್ಚ್ನಲ್ಲಿ ಅವರ ಜತೆ ಮದುವೆಯಾಗಿದ್ದೇನೆ’ ಎಂದು ಯುವತಿ ಹೇಳಿಕೊಂಡಿದ್ದಳು. ಇದನ್ನೂ ಓದಿರಿಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ