More

    ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

    ನಂಜನಗೂಡು: ಈ ಭಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯಾದ್ಯಂತ ತಾಲೂಕಿನ ಹುಳಿಮಾವು ಗ್ರಾಪಂ ಸದ್ದು ಮಾಡಿತ್ತು. ಏಕೆಂದರೆ ಇಲ್ಲಿನ ಬೊಕ್ಕಹಳ್ಳಿ ಕ್ಷೇತ್ರದಿಂದ ಸಾಮಾನ್ಯ ಮೀಸಲು ಸ್ಥಾನಕ್ಕೆ ನಿರ್ಗತಿಕ ವ್ಯಕ್ತಿಯೊಬ್ಬರು ಸ್ಪರ್ಧಿಸಿದ್ದರು.

    ಸಾಹಸಸಿಂಹ ಡಾ. ವಿಷ್ಣುವರ್ಧನ್ ನಟನೆಯ ‘ಸಿಂಹಾದ್ರಿಯ ಸಿಂಹ’ ಸಿನಿಮಾದಲ್ಲಿ ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ದೃಶ್ಯದಿಂದ ಪ್ರೇರಣೆಗೊಂಡ ಗ್ರಾಮದ ಯುವಕರು, ನಿರ್ಗತಿಕ ವ್ಯಕ್ತಿ ಅಂಕಪ್ಪನಾಯ್ಕ ಎಂಬಾತನನ್ನು ಗ್ರಾಪಂ ಚುನಾವಣೆಗೆ ನಿಲ್ಲಿಸಿದ್ದರು. ನಿತ್ಯ ನಂಜನಗೂಡಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತ ಅವರಿವರ ಬಳಿ ಕಾಸಿಗಾಗಿ ಕೈಚಾಚಿ ಅರೆಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಂಕಪ್ಪನಾಯ್ಕನಿಗೆ ಯಾರ ಆಶ್ರಯವೂ ಇಲ್ಲ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

    ಒಟ್ಟು 2 ಎಸ್ಟಿ ಮಹಿಳೆ, ತಲಾ ಒಂದು ಎಸ್ಟಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಬ್ಲಾಕ್​ನಲ್ಲಿ ಯುವಕರ ಒತ್ತಾಸೆ ಮೇರೆಗೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ನಿರ್ಗತಿಕ ಅಂಕಪ್ಪನಾಯ್ಕರ ಫಲಿತಾಂಶ ತೀವ್ರ ಕುತೂಹಲ ಮೂಡಿಸಿತ್ತು. ಚುನಾವಣೆಯ ಗಂಧ ಗಾಳಿಯೇ ಗೊತ್ತಿಲ್ಲದ ಅಂಕಪ್ಪನಾಯ್ಕ 311 ಮತ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಬಲ ಪೈಪೋಟಿ ನೀಡುವ ಮೂಲಕ ಮೂವರು ಅಭ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಿ ತಾವೂ ಪರಾಜಿತಗೊಂಡಿದ್ದಾರೆ.

    ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್​.ನಾಗೇಂದ್ರ 430, ಸೂರ್ಯಪ್ರಕಾಶ್​ 236, ರಾಜು 99 ಮತ ಪಡೆದಿದ್ದರು. ಎಸ್ಟಿ ಮೀಸಲು ಸ್ಥಾನದಲ್ಲಿ ಸ್ಪರ್ಧಿಸಿ 482 ಮತ ಪಡೆದ ಶಿವರಾಮನಾಯ್ಕ ಸಾಮಾನ್ಯ ಕ್ಷೇತ್ರದಿಂದ ಚುನಾಯಿತರಾದರು.

    ಎಸ್ಟಿ ಮೀಸಲು ಸ್ಥಾನದಲ್ಲಿ 607 ಮತ ಪಡೆದ ಬಸವರಾಜು ಆಯ್ಕೆಗೊಂಡಿದ್ದರಿಂದ ಶಿವರಾಮನಾಯ್ಕ ಸಾಮಾನ್ಯ ಕ್ಷೇತ್ರದ ಸ್ಪರ್ಧೆಗೆ ಜಿಗಿದರು. ಈ ವೇಳೆ ಅಂಕಪ್ಪನಾಯ್ಕ 311 ಮತ ಪಡೆದು ಶಿವರಾಮನಾಯ್ಕರ ಆಯ್ಕೆಗೆ ಪರೋಕ್ಷವಾಗಿ ನೆರವಾದರು. ಆ ಮೂಲಕ ಸಾಮಾನ್ಯ ಅಭ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಿದರು.

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲುವು

    ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

    ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts