More

    ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

    ಚಿಕ್ಕಮಗಳೂರು: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಅವರು ಶರವೇಗದ ರೈಲಿಗೆ ಹೇಗೆ ಬಲಿಯಾದರು ಎಂಬುದನ್ನ ರೈಲು ಚಾಲಕ ಹೇಳಿದ್ದಾರೆ.

    ಸೋಮವಾರ ಸಂಜೆ ಶರವೇಗದಲ್ಲಿ ಜನ ಶತಾಬ್ಧಿ ರೈಲು ಆಗಮಿಸುತಿತ್ತು. ಕಡೂರು ತಾಲೂಕಿನ ಗುಣಸಾಗರದ ಬಳಿ ಸಂಜೆ 6.45ರ ಸುಮಾರಿಗೆ ರೈಲು ಬಂದಾಗ ಬಿಳಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ಹಳಿಯ ಮೇಲೆ ನೇರಾನೇರ ನಿಂತಿದ್ದರು. ರೈಲಿಗೆ ಎದೆಯೊಡ್ಡಿ ನಿಂತೇ ಬಲಿಯಾದರು ಎಂದು ಅರಸೀಕೆರೆ ರೈಲ್ವೆ ಪೊಲೀಸರಿಗೆ ರೈಲು ಚಾಲಕ ಸಿದ್ದರಾಮ್ ಮಾಹಿತಿ ನೀಡಿದ್ದಾರೆ.

    ರೈಲ್ವೆ ಹಳಿ ಮೇಲೆ ವ್ಯಕ್ತಿ ನಿಂತಿದ್ದನ್ನು ನಾನು ಗಮನಿಸಿದೆ. ಅತ್ಯಂತ ವೇಗದಲ್ಲಿದ್ದ ರೈಲನ್ನು ಬ್ರೇಕ್ ಹಾಕಿ ನಿಲ್ಲಿಸುವುದು ಸಾಧ್ಯವಾಗಲಿಲ್ಲ ಎಂದು ಸಿದ್ದರಾಮ್ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿರಿ ಧರ್ಮೇಗೌಡರ ಡೆತ್​ನೋಟ್​ ಸಿಕ್ಕಿದೆ- ಅದರಲ್ಲಿ ಅನೇಕ ರಹಸ್ಯಗಳಿವೆ: ಸಿಎಂ ಯಡಿಯೂರಪ್ಪ

    ರೈಲಿಗೆ ದೇಹವೊಡ್ಡಿ ಸಾಯಲು ನಿಂತ ಧರ್ಮೇಗೌಡರ ಕಠಿಣ ತೀರ್ಮಾನಕ್ಕೆ ಕಾರಣವಾದ ಅಂಶ ಯಾವುದಿರಬಹುದು ಎನ್ನುವ ಯಕ್ಷ ಪ್ರಶ್ನೆಗೆ ಉತ್ತರ ದೊರೆಯದೆ ಬುಧವಾರವೂ ಅವರ ಅಭಿಮಾನಿಗಳು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಚಡಪಡಿಸಿದರು. ನಗರದ ಕಲಾಮಂದಿರದಲ್ಲಿ ಸೋಮವಾರ ಬೆಳಗ್ಗೆಯಷ್ಟೆ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಸಮಾನವಾಗಿ ಸ್ವೀಕರಿಸುವುದು ಮುಖ್ಯ ಎಂದು ಧರ್ಮೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂಥ ವ್ಯಕ್ತಿ ಸಂಜೆಯ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರಾಜಕೀಯ ಕಾರಣಕ್ಕೆ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿಲ್ಲ. ದಿಢೀರ್ ಒಂದು ತೀರ್ಮಾನಕ್ಕೆ ಬರುವುದು ಸರಿಯಲ್ಲ. ಧರ್ಮೇಗೌಡರ ಸ್ವಭಾವ ಬಹಳ ಸೂಕ್ಷ್ಮ. ಅವರು ತುಂಬಾ ಧೈರ್ಯವಂತರೂ ಹೌದು ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈಎಸ್​ವಿ, ಧರ್ಮೇಗೌಡರ ಸ್ವಭಾವವನ್ನು ಹತ್ತಿರದಿಂದ ಬಲ್ಲೆ. ಅನೇಕ ಏಳುಬೀಳು ಕಂಡಿದ್ದಾರೆ. ಅವರಿಗೆ ಅವಮಾನ ಆಗುವಂತಹದ್ದೇನಿಲ್ಲ. ರಾಜಕೀಯ ಕಾರಣಗಳು ಕಾರಣವೇನಲ್ಲ ಎಂದಿದ್ದಾರೆ.

    ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts