VIDEO | ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿದ ರಮ್ಯಾ ಕೃಷ್ಣನ್​​; ನಟಿಯ ಈ ರೆಸಿಪಿಗೆ ಲೈಕ್‌ಗಳ ಸುರಿಮಳೆ…

ramya krishnan
Published on

ಬೆಂಗಳೂರು: ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿದ್ದಾರೆ. ಸಿನಿಮಾದಿಂದ ಕೊಂಚ ಬ್ರೇಕ್​ ಪಡೆದು ರೀಲ್ಯಾಕ್ಸ್​​ ಮೂಡ್​​ನಲ್ಲಿರುವ ನಟಿ ಒಲೆ ಇಲ್ಲದೆ ಬೇಯಿಸದೆ ರುಚಿಕರವಾದ ಅಡುಗೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್​​ಸ್ಟಾಗ್ರಮ್​​ನಲ್ಲಿ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ. ರಮ್ಯಾ ಕೃಷ್ಣನ್ ಮಾವಿನಕಾಯಿ ಟಾರ್ಟ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಒಲೆಯಿಲ್ಲದೆ ಅಡುಗೆ ಮಾಡುವುದನ್ನು ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ರಮ್ಯಾ ಕೃಷ್ಣನ್ ಅವರ ವಿಡಿಯೋಗೆ ಸಾಕಷ್ಟು ಲೈಕ್ಸ್ ಬರುತ್ತಿದೆ.

ವಿಡಿಯೋದಲ್ಲಿ ರಮ್ಯಾ ಕೃಷ್ಣ ಅವರು ಮಾವಿನ ಕಾಯಿಯನ್ನು ಚಿಕ್ಕದಾಗಿ ಕಟ್​​ ಮಾಡಿಕೊಂಡು ಒಂದು ಬೌಲ್​ಗೆ ಹಾಕುತ್ತಾರೆ. ನಂತರ ಇದೆ ಬೌಲ್​​ಗೆ ಉಪ್ಪು, ಖಾರದಪುಡಿ, ಮಸಾಲೆ ಪೌಡರ್​ ಹಾಗೂ ಅಡುಗೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಾರೆ. ರುಚಿಯಾದ ಉಪ್ಪಿನಕಾಯಿ ಸವಿಯಲು ಸಿದ್ಧವಾಗುತ್ತದೆ.

ರಮ್ಯಾ ಕೃಷ್ಣನ್ ನಟಿ ಮಾತ್ರವಲ್ಲದೆ ಖಳನಾಯಕಿಯಾಗಿಯೂ ತಮಿಳು ಸಿನಿಮಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಮಲ್ ಹಾಸನ್ ಜೊತೆ ಪಂಚ ತಂತ್ರಂ ಚಿತ್ರದಲ್ಲಿ ಮಾಗಿಯಾಗಿ ನಟಿಸಿದ್ದ ರಮ್ಯಾ ಕೃಷ್ಣನ್ ಅವರು ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಮತ್ತು ಕನ್ನಡದಂತಹ ಇತರ ಭಾಷೆಯ ಚಿತ್ರಗಳಲ್ಲಿ ಹಲವಾರು ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ.

ರಮ್ಯಾ ಕೃಷ್ಣನ್ ಅವರು ತೆಲುಗು ಚಲನಚಿತ್ರ ನಿರ್ದೇಶಕ ಕೃಷ್ಣ ವರ್ಮಾ ಅವರನ್ನು ವಿವಾಹವಾದರು ಮತ್ತು ಒಬ್ಬ ಮಗನು ಇದ್ದಾನೆ. ಮದುವೆಯ ನಂತರ ರಮ್ಯಾ ಕೃಷ್ಣನ್ ಸಿನಿಮಾದಲ್ಲಿ ಮಾತ್ರವಲ್ಲದೆ ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಲು ಆರಂಭಿಸಿದರು. ಆ ಮೂಲಕ ಸನ್ ಟಿವಿಯಲ್ಲಿ ಅವರು ನಟಿಸಿದ ತಂಗಂ ಮತ್ತು ವಂಶಂ ಧಾರಾವಾಹಿಗಳು ಭಾರೀ ಹಿಟ್ ಆದವು.

2015 ರಲ್ಲಿ ರಾಜಮೌಳಿ ನಿರ್ದೇಶಿಸಿದ ಬಾಹುಬಲಿಯಲ್ಲಿ ರಮ್ಯಾ ಕೃಷ್ಣನ್ ಅವರ ರಾಜಮಾತೆ ಶಿವಕಾಮಿದೇವಿಯ ಪಾತ್ರವು ದೊಡ್ಡ ಮಟ್ಟದಲ್ಲಿ ತಲುಪಿತು ಮತ್ತು ಅವರು ಪ್ರಶಂಸೆಯನ್ನು ಪಡೆದರು. ನಂತರ ಕ್ವೀನ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದ ರಮ್ಯಾ ಕೃಷ್ಣನ್ ಸದ್ಯ ಅದರ ಎರಡನೇ ಭಾಗದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net