More

    ಡಿ ಬಾಸ್​ ಅಭಿನಯದ “ಕರಿಯ” ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

    ಬೆಂಗಳೂರು: ಸ್ಯಾಂಡಲ್​​ವುಡ್​ ನಟ ದರ್ಶನ್​ ಅಭಿನಯದ ಸಿನಿಮಾ ಕರಿಯ. ಈ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೈಪ್​ ಕ್ರೀಯೆಟ್​​ ಮಾಡಿತ್ತು. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಅಭಿನಯಶ್ರೀ ದರ್ಶನ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ನಂತರ ಕನ್ನಡಲ್ಲಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ಮತ್ತೆ ಕಾಣಿಸಿಕೊಳ್ಳಲೇ ಇಲ್ಲ. ಈಗ ಈಕೆ ಹೇಳಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಇರಬಹುದು. ನಾವು ಇಂದು ನಿಮಗೆ ಈ ಕುರಿತಾಗಿ ಕೆಲವು ಮಾಹಿತಿ ನೀಡಲಿದ್ದೇವೆ.

    ಡಿ ಬಾಸ್​ ಅಭಿನಯದ "ಕರಿಯ" ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

    ಅಭಿನಯಶ್ರೀ ತೆಲುಗು,ಕನ್ನಡ ಮತ್ತು ತಮಿಳು, ಮಲಯಾಳಂ ಚಿತ್ರರಂಗದ ನಟಿ. ಕನ್ನಡದಲ್ಲಿ ಇವರು ದರ್ಶನ್ ಅಭಿನಯದ `ಕರಿಯ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.ಇವರ ತಾಯಿ ಅನುರಾಧಾ ಸುಮಾರು 700 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    ಡಿ ಬಾಸ್​ ಅಭಿನಯದ "ಕರಿಯ" ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

    2001 ರ ತಮಿಳು ಹಾಸ್ಯ ಫ್ರೆಂಡ್ಸ್ ನಲ್ಲಿ ಬಂದಿತು, ಇದರಲ್ಲಿ ಅವರು ವಿಜಯ್ ಮತ್ತು ಸೂರ್ಯ ಅವರೊಂದಿಗೆ ಕಾಣಿಸಿಕೊಂಡರು. 2004 ರ ತೆಲುಗು ಚಲನಚಿತ್ರ ಆರ್ಯದಲ್ಲಿ “ಆ ಅಂತೇ ಅಮಲಾಪುರಂ” ಹಾಡಿಗೆ ಐಟಂ ಡಾನ್ಸ್​​ನಲ್ಲಿ ಅಲ್ಲು ಅರ್ಜುನ್ ಜತೆಗೆ ಕಾಣಿಸಿಕೊಂಡ ನಂತರ ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆದರು. ಯಶಸ್ಸು ನಟಿಗೆ ಇದೇ ರೀತಿಯ ಪಾತ್ರಗಳಲ್ಲಿ ಮತ್ತಷ್ಟು ಕೊಡುಗೆಗಳನ್ನು ನೀಡಿತು. ನಟಿ, ಐಟಂ ಡಾನ್ಸ್​​, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ Iಕೆಗೆ ಒದಗಿ ಬಂತು. ನಂತರ ತೆಲುಗು,ಕನ್ನಡ ಮತ್ತು ತಮಿಳು, ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರು.

    ಡಿ ಬಾಸ್​ ಅಭಿನಯದ "ಕರಿಯ" ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

    ಸ್ಯಾಂಡಲ್​ವುಡ್​​ಗೆ 123 ಸಿನಿಮಾ ಮೂಲಕವಾಗಿ ಅಭಿನಯಶ್ರೀ ಎಂಟ್ರಿಯಾದರು. ನಂತರ ದರ್ಶನ ಅಭಿನಯದ ಕರಿಯ ಸಿನಿಮಾ ಮೂಲಕವಾಗಿ ದೊಡ್ಡ ಹಿಟ್​​ ಪಡೆದುಕೊಂಡರು. ಡಿಬಾಸ್​ಗೆ ಜೋಡಿಯಾಗಿ ಅಭಿನಯಶ್ರೀ ನಟಿಸಿದ್ದರು. ಕರಿಯ ದೊಡ್ಡ ಓಪನಿಂಗ್ ಹೊಂದಿದ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿ ಭೂಗತ ಜಗತ್ತನ್ನು ಬಹಳ ಹತ್ತಿರದಿಂದ ತೋರಿಸಿದ್ದರು. ಈ ಸಿನಿಮಾದಲ್ಲಿ ರಿಯಲ್‌ ರೌಡಿಗಳು ನಟಿಸಿದ್ದರು. ಈ ಸಿನಿಮಾ ರಿಲೀಸ್ ಆದ್ಮೇಲೆ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆಯಿತು. 100 ದಿನಗಳಿಗಿಂತ ಹೆಚ್ಚು ಥಿಯೇಟರ್ ರನ್ ಆಗಿತ್ತು. ಕರ್ನಾಟಕದಲ್ಲಿ 675 ದಿನಗಳ ಥಿಯೇಟ್ರಿಕಲ್ ರನ್ ಅನ್ನು ಪೂರ್ಣಗೊಳಿಸುವ ಮೂಲಕ ಚಲನಚಿತ್ರವನ್ನು ಬ್ಲಾಕ್ಬಸ್ಟರ್ ಎಂದು ಘೋಷಿಸಲಾಯಿತು. ಈ ಸಿನಿಮಾ ನಂತರ ಅಭಿನಯಶ್ರೀ ಲಕ್​ ಬದಲಾಯಿಸಿತ್ತು. ಜೂಟಾಟ, ವಾರೇ ವಾಃ,  ಸೌಂದರ್ಯ ನಿಲಯ ಸಿನಿಮಾ ಸೇರಿದಂತೆ ಅಭಿನಯಶ್ರೀ ಪರಭಾಷೆಯಲ್ಲೂ ಕಾಣಿಸಿಕೊಂಡರು.

    ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಆರ್ಯ’ ಸಿನಿಮಾದಲ್ಲಿ ‘ಆ ಅಂಟೆ ಅಮಲಾಪುರ…’ ಹಾಡಿಗೆ ಸಖತ್ ಆಗಿ ಕುಣಿದಿದ್ದರು. ಈ ಡಾನ್ಸ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಅಲ್ಲು ಅರ್ಜುನ್ ಅವರ ಆರ್ಯ ಚಿತ್ರದ ಹಾಡುಗಳು ದೊಡ್ಡ ಹಿಟ್ ಆಗಿವೆ. ಈ ಹಾಡಿನಲ್ಲಿ ಅಭಿನಯಶ್ರೀ ನಟಿಸಿದ್ದಾರೆ. ಅಭಿನಯಶ್ರೀ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ವಿಶೇಷ ಹಾಡುಗಳ ಮೂಲಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಜನಮನ್ನಣೆ ಗಳಿಸಿದ್ದಾರೆ. ಆರ್ಯ ಚಿತ್ರದಲ್ಲಿ ಅಮಲಾಪುರಂ.. ಹಾಡಿನ ಮೂಲಕ ಫುಲ್ ಪಾಪ್ಯುಲರ್ ಆದರು.

    ಡಿ ಬಾಸ್​ ಅಭಿನಯದ "ಕರಿಯ" ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

    ಆರ್ಯ ಚಿತ್ರ ಬಿಡುಗಡೆಯಾಗಿ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಡೀ ಚಿತ್ರತಂಡವೇ ಪಾಲ್ಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಅಭಿನಯಶ್ರೀ ಕೂಡ ಬಂದಿದ್ದರು. ಅಂದಿನಿಂದ ಅಭಿನಯಶ್ರೀ ಸಾಕಷ್ಟು ಬದಲಾಗಿದ್ದಾರೆ.

    20 ವರ್ಷಗಳ ನಂತರ ಮತ್ತೊಮ್ಮೆ ವೇದಿಕೆ ಮೇಲೆ ಅಂದರೆ ಅಮಲಾಪುರಂ.. ಹಾಡಿ ಕುಣಿದು ರಂಜಿಸಿದರು. ಇದರೊಂದಿಗೆ ಈವೆಂಟ್‌ನಲ್ಲಿದ್ದ ಎಲ್ಲರೂ ಚೈತನ್ಯ ತುಂಬಿದರು. ಹೀಗೆ ಅವರನ್ನು ನೋಡಿ ಅಭಿನಯಶ್ರೀ ತುಂಬಾ ಬದಲಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಅಭಿನಯಶ್ರೀ ಮಾತನಾಡಿ, ಈ ಹಾಡು ನನಗೆ ಜೀವನದಲ್ಲಿ ದೊಡ್ಡ ಕೊಡುಗೆ. ಶಂಕರ್ ಮೇಷ್ಟ್ರು ಬೇರೆ ಯಾವುದೋ ಶೂಟಿಂಗ್ ವೇಳೆ ಈ ಹಾಡಿಗೆ ಡ್ಯಾನ್ಸರ್ ಹುಡುಕುತ್ತಿದ್ದಾರೆ ಅಂತ ಗೊತ್ತಾದ ಮೇಲೆ ಆಫರ್ ಬಂತು. ನಾವು ರೈಲಿನಲ್ಲಿ ಆರು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಬೆಳಗಿನ ಜಾವ 3 ಗಂಟೆಗೆ ಬೇಗ ಎದ್ದು 6 ಗಂಟೆಗೆ ತಯಾರಾಗುತ್ತಿದ್ದೇವು. ರೈಲು 6 ಗಂಟೆಗೆ ಬರುತ್ತಿತ್ತು. ಆ ಆರು ದಿನ ಸರಿಯಾದ ನಿದ್ದೆ, ಊಟ ಇಲ್ಲ. ಆದರೆ ಜೀವಮಾನವಿಡೀ ನೆನಪಿನಲ್ಲಿ ಉಳಿಯುವ ಹಾಡು ಇದೆ ಎಂದರು.

    ಡಿ ಬಾಸ್​ ಅಭಿನಯದ "ಕರಿಯ" ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

    ಕೊನೆಯದಾಗಿ 2018ರಲ್ಲಿ ತೆರೆಕಂಡ ‘ಇರವಕ್ಕು ಆಯಿರಾಮ್ ಕಂಗಲ್’ ಸಿನಿಮಾದಲ್ಲಿ ನಟಿಸಿದ್ದರು. ಅಭಿನಯಶ್ರೀ ಸದ್ಯ ಕೊರಿಯೋಗ್ರಾಫರ್ ಆಗಿ ಜೀವನ ನಡೆಸುತ್ತಿದ್ದಾರೆ, ಟಿವಿಯ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿನಯಶ್ರೀ ಇನ್ನು ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ.ತೆಲುಗಿನಲ್ಲಿ ಸಿನಿಮಾ ಮಾಡಿ ಸುಮಾರು ಹತ್ತು ವರ್ಷಗಳಾಗಿವೆ. ಇತ್ತೀಚೆಗೆ, ಅವರು ತೆಲುಗು ಬಿಗ್ ಬಾಸ್ 2022 ರಲ್ಲಿ ಭಾಗವಹಿಸಿ ರಂಜಿಸಿದರು. ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.

    ಪತ್ನಿ ಗರ್ಭಿಣಿ, ಇತ್ತ ಮದ್ವೆ ಫೋಟೋ ಡಿಲೀಟ್; ಮಗು ಹುಟ್ಟೋ ಸಮಯದಲ್ಲಿ ರಣವೀರ್, ದೀಪಿಕಾ ಹೀಗ್ಯಾಕೆ ಮಾಡ್ತಿದ್ದಾರೆ?

    ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ದಿನಾಂಕ ಫಿಕ್ಸ್; ಚೆನ್ನೈನಲ್ಲೇ ನಡೆಯಲಿದೆ ವಿವಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts