

ಬೆಂಗಳೂರು: ಬಹುಭಾಷಾ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಹೂರ್ತದ ದಿನಾಂಕ ಕೂಡಾ ನಿಗಧಿಯಾಗಿದೆ.
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅವರ ನಿಶ್ಚಿತಾರ್ಥವು ತಮಿಳುನಾಡಿನ ಚೆನ್ನೈನಲ್ಲಿ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಜತೆಗೆ ಆಗಿತ್ತು. ನಟ ಅರ್ಜುನ್ ಸರ್ಜಾ ಸದ್ಯ ಮೊದಲನೇ ಮಗಳು ಐಶ್ವರ್ಯಾ ಅವರು ಉಮಾಪತಿ ರಾಮಯ್ಯ ಅವರ ಕೈ ಹಿಡಿಯುತ್ತಿದ್ದಾರೆ. ಮದುವೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈ ಮದುವೆ ಚೆನ್ನೈನಲ್ಲೇ ನಡೆಯಲಿದ್ದು, ಜೂನ್ 10ರಂದು ಮದುವೆ ಮಾಡುತ್ತಿದ್ದಾರೆ. ಈ ಮದುವೆಯಲ್ಲಿ ಸಂಬಂಧಿಕರು ಹಾಗೂ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ.ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.
80-90ರ ದಶಕದ ನಟ ಅರ್ಜುನ್ ಸರ್ಜಾ ಆಶಾ ರಾಣಿ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಇಬ್ಬರು ಪುತ್ರಿಯರು. ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪದಾರ್ಪಣೆ ಮಾಡಿದರು.
ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ಸ್ವತಃ ಹೋಸ್ಟ್ ಮಾಡಿದ ರಿಯಾಲಿಟಿ ಟಿವಿ ಶೋ “ಸರ್ವೈವರ್ ತಮಿಳು” ನಲ್ಲಿ ಉಮಾಪತಿ ಸ್ಪರ್ಧಿಯಾಗಿ ಭಾಗವಹಿಸಿದ್ದರು, ಈ ಮೂಲಕ ಅರ್ಜುನ್ ಫ್ಯಾಮಿಲಿಗೆ ಉಮಾಪತಿ ರಾಮಯ್ಯ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಇವರಿಬ್ಬರ ನಡುವೆ ಸ್ನೇಹವಾಗಿ ಬಳಿಕ ಪ್ರೇಮಕ್ಕೆ ತಿರುಗಿದೆ ಎಂದು ವರದಿಯಾಗಿದೆ.