ಊಟ ಮಾಡಲು ಸಾಧ್ಯವಾಗದೆ, ನಿದ್ದೆ ಇಲ್ಲದೆ ಬಳಲುತ್ತಿದ್ದ ಖ್ಯಾತ ಸೌತ್ ನಟಿ ನಿಧನ

kanakalatha
Published on

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಕನಕಲತಾ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕನಕಲತಾ ಅವರಿಗೆ (64 ) ವರ್ಷವಾಗಿತ್ತು. ನಟಿ ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಕೆಲವು ವರ್ಷಗಳಿಂದ ಅಸ್ವಸ್ಥರಾಗಿದ್ದರು.

ಕಳೆದ 3 ವರ್ಷಗಳಿಂದ ಪಾರ್ಕಿನ್ಸನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಮೆದುಳು ಕುಗ್ಗತೊಡಗಿತು. ನಿದ್ರಾಹೀನತೆ ಸೇರಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ವರ್ಷಾನುಗಟ್ಟಲೆ ನಿದ್ದೆ ಬರುತ್ತಿರಲಿಲ್ಲ. ಕಳೆದ ವರ್ಷ, ಅವರ ಸಹೋದರಿ ವಿಜಯಮ್ಮ ಅವರು ಕನಕಲತಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು.

ರೋಗ ಲಕ್ಷಣಗಳು 2021 ರಲ್ಲಿ ಕಾಣಿಸಿಕೊಂಡವು. ಆಗಸ್ಟ್ 2022 ರಲ್ಲಿ, ವೈದ್ಯರು ಅವರ MRI ಸ್ಕ್ಯಾನ್ ಅನ್ನು ನಡೆಸಿದಾಗ, ಅವರಿಗೆ ಬುದ್ಧಿಮಾಂದ್ಯತೆ ಇರುವುದು ಪತ್ತೆಯಾಯಿತು. ಊಟ ಮಾಡಲೂ ಆಗದಂತಹ ಭೀಕರ ಆರೋಗ್ಯ ಸ್ಥಿತಿಯಿಂದ ಬಳಲುತ್ತಿದ್ದರು. ಎಲ್ಲವನ್ನೂ ಮರೆತು ತನ್ನ ಹೆಸರನ್ನೂ ಮರೆತು ಹೋಗಿದ್ದರು. ಪಾರ್ಕಿನ್ಸನ್ ಮತ್ತು ಬುದ್ಧಿಮಾಂದ್ಯತೆಯ ಲಕ್ಷಣವಾಗಿದೆ. 2005ರಲ್ಲಿ ವಿಚ್ಛೇದನ ಪಡೆದ ಕನಕಲತಾ ಅವರಿಗೆ ಮಕ್ಕಳಿಲ್ಲ. ಸಹೋದರಿ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿದ್ದರು.

ರಂಗಭೂಮಿಯಿಂದ ಚಿತ್ರರಂಗಕ್ಕೆ ಕಾಲಿಟ್ಟ ಕನಕಲತಾ ಅವರು ಸರಿಸುಮಾರು 350 ಚಿತ್ರಗಳಲ್ಲಿ ಮತ್ತು ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯ ಮೂಲಕ ಕಲಾ ಕ್ಷೇತ್ರಕ್ಕೆ ಬಂದ ಕನಕಲತಾ ಅವರು 30 ವರ್ಷಗಳ ಕಾಲ ರಂಗಭೂಮಿ, ಟೆಲಿ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net