

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿ ವಿಭಿನ್ನ ಮತಯಾಚನೆ ಪತ್ರದೊಂದಿಗೆ ರಾಜ್ಯದಲ್ಲೇ ಸದ್ದು ಮಾಡಿದ್ದ ಗಂಡೆದೆ ಗಂಗಮ್ಮಗೆ ಬಿದ್ದ ಮತಗಳೆಷ್ಟು ಗೊತ್ತಾ? ಚಪ್ಪಲಿ ಗುರುತಿನೊಂದಿಗೆ ಅಖಾಡಕ್ಕಿಳಿದಿದ್ದ ಇವರು ಪಡೆದ ಮತಗಳ ಸಂಖ್ಯೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.
ತುಮಕೂರು ತಾಲೂಕಿನ ಹೆಬ್ಬೂರು ಗ್ರಾಪಂ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್. ಗಂಗಮ್ಮ, ಚುನಾವಣಾ ಪ್ರತಾರಕ್ಕೆ ನೆಗೆಟಿವ್ ಇಮೋಷನ್ ದಾಳವಾಗಿ ಬಳಸಿಕೊಂಡಿದ್ದರು. ಗೆದ್ದರೆ ಏನು ಮಾಡಿವು ಎನ್ನುವುದಕ್ಕಿಂತ ಸೋತರೆ ಏನೇನು ಮಾಡಿಸುತ್ತೇನೆ ಎಂದು ಖಡಕ್ ವಾರ್ನಿಂಗ್ ಮಾಡುವ ಮೂಲಕ ಮತದಾರರಲ್ಲಿ ಭೀತಿ ಉಟ್ಟಿಸಿದ್ದರು.
ಪಾದರಕ್ಷೆ ಗುರುತು ಪಡೆದಿದ್ದ ಗಂಗಮ್ಮಗೆ ಕಲ್ಕೆರೆ ಕ್ಷೇತ್ರದಲ್ಲಿ ಕೇವಲ 6 ಮತ ಬಿದ್ದಿವೆ. ದೊಡ್ಡಗುಣಿ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾಗಿದ್ದ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಗಂಗಮ್ಮಗೆ 2 ಮತ ಬಂದಿದೆ. ಒಟ್ಟಿನಲ್ಲಿ ಗಂಗಮ್ಮ ಗೆದ್ದು ಮಾಡುವ ಕೆಲಸಕ್ಕಿಂತ ಸೋತು ಮಾಡುವ ಕೆಲಸವೇ ಮುಖ್ಯ ಎಂದು ಮತದಾರರು ಯೋಚಿಸಿರಬೇಕು. ಹಾಗಾಗಿ ಹೀನಾಯವಾಗಿ ಸೋತಿದ್ದಾರೆ.