More

    ಗ್ರಾಪಂ ಚುನಾವಣೆಯಲ್ಲಿ ಗೆದ್ದ 28 ವರ್ಷದ ಇಂಜಿನಿಯರಿಂಗ್​ ಉದ್ಯೋಗಿ

    ಉತ್ತರ ಕನ್ನಡ: ಲೋಕಲ್​ ವಾರ್​ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಚುನಾವಣೆ ರಾಜ್ಯಾದ್ಯಂತ ಜಿದ್ದಾಜಿದ್ದಿನ ಅಖಾಡವಾಗಿತ್ತು. ಎರಡು ಹಂತದಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂದು(ಬುಧವಾರ) ಪ್ರಕಟವಾಗಿದ್ದು, ಸೊಸೆ ವಿರುದ್ಧ ಅತ್ತೆ ಗೆಲುವು, ಗಂಡ-ಹೆಂಡತಿ ಇಬ್ಬರೂ ಜಯಭೇರಿ ಬಾರಿಸಿದ, ಒಂದು ಮತದಿಂದ ಜಯ, ಲಾಟರಿ ಮೂಲಕ ವಿಜಯ, ಗೆಲುವಿನ ಖುಷಿ ತಂದ ಅಂಚೆ ಮತ… ಹೀಗೆ ಹಲವು ಸ್ವಾರಸ್ಯಕರ ಸಂಗತಿ ಗತಿಸಿದೆ.

    ಇದೀಗ ಬಿಇ ಪದವೀಧರೆಗೆ ಗ್ರಾಪಂ ಸದಸ್ಯೆ ಸ್ಥಾನ ಲಭಿಸಿದೆ. ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ 28 ವರ್ಷದ ವೆಲಿಂಡಾ ಡಿಸೋಜಾ ಜಯಭೇರಿ ಬಾರಿಸಿದ್ದಾರೆ.

    ಇಂಜಿನಿಯರಿಂಗ್​ ಉದ್ಯೋಗಿಯಾಗಿರುವ ವೆಲಿಂಡಾ ಡಿಸೋಜಾ ಅತಿ ಕಿರಿಯ ವಯಸ್ಸಿನಲ್ಲಿ ಗ್ರಾಪಂ ಮೆಟ್ಟಿಲೇರಿದ ಕೀರ್ತಿಗೆ ಪಾತ್ರವಾಗಿದ್ದಾರೆ. ಚುನಾವಣೆ ಅಖಾಡಕ್ಕಿಳಿದ ಮೊದಲ ಬಾರಿಗೆ ಯಶಸ್ಸು ಕಂಡಿದ್ದಾರೆ.

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲವು

    ಭೀಕರ ರಸ್ತೆ ಅಪಘಾತ : ಅಪ್ಪನ ಮತಎಣಿಕೆಗೆ ಹೊರಟ ಮಗ ಮತ್ತು ಇನ್ನೊಬ್ಬನ ಬಲಿ

    ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts