More

  ನೀರು ನುಗ್ಗದಂತೆ ಶಾಶ್ವತ ಪರಿಹಾರ ಕೈಗೊಳ್ಳಿ

  ರಾಯಚೂರು: ನಗರದ ಸ್ಲಂಗಳಲ್ಲಿನ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ಪ್ರತಿ ಮಳೆಗಾಲದಲ್ಲಿ ನೀರು ನುಗ್ಗಿ ಜನರು ಸಮಸ್ಯೆ ಎದುರಿಸುತ್ತಿದ್ದು, ನೀರು ನುಗ್ಗದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಒತ್ತಾಯಿಸಿದೆ.
  ವೇದಿಕೆ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಮಹ್ಮದ್ ಆಸ್ೀಗೆ ಶನಿವಾರ ಮನವಿ ಸಲ್ಲಿಸಿ, ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆಯಾಗುತ್ತಿದ್ದು, ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
  ನಗರದ ಕಾಕನಕೆರೆಇ, ಉರುಕುಂದಿ ಈರಣ್ಣ ನಗರ, ಯಲ್ಲಮ್ಮ ಗುಡಿ, ಹರಿಜನವಾಡ, ದೇವಿನಗರ, ಹೊಸೂರು, ಜಲಾಲ್‌ನಗರ, ಮೈಲಾರನಗರ, ಕಾಳಿದಾಸ ನಗರ, ಸಿಯಾತಲಾಬ್, ನೀರಬಾವಿಕುಂಟಾ ಸೇರಿದಂತೆ ಇನ್ನಿತರ ಸ್ಲಂಗಳಲ್ಲಿ ಕಳೆದ ಮುರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
  ಮನೆಯಲ್ಲಿನ ದವಸ ಧಾನ್ಯ, ದಾಖಲೆಗಳು ಹಾಗೂ ಇನ್ನಿತರ ಸಾಮಗ್ರಿಗಳು ಮಳೆ ನೀರಿನಿಂದ ಹಾಳಾಗಿವೆ. ಜತೆಗೆ ಮಳೆ ನೀರು ತಗ್ಗು ಪ್ರದೇಶದಲ್ಲಿ 15 ದಿನಗಳ ನಿಲ್ಲುತ್ತಿರುವುದರಿಂದ ಜನರು ಮನೆ ಬಿಟ್ಟು ಸಮುದಾಯ ಭವನದಲ್ಲಿ ಆಶ್ರಯ ಪಡೆಯುವಂತಾಗಿದೆ.
  ಜಿಲ್ಲಾಡಳಿತ ಕೂಡಲೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ಕ್ರಮಕೈಗೊಳ್ಳಬೇಕು. ರಾಜಾ ಕಾಲುವೆ, ಚರಂಡಿಗಳ ಹೂಳೆತ್ತಬೇಕು. ಅತಿಕ್ರಮಣ ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
  ನಿಯೋಗದಲ್ಲಿ ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಮಾರುತಿ, ಮಹೇಶ, ರಾಜಶೇಖರ, ನೂರ್ ಜಹಾನ್, ಬಸವರಾಜ, ಶರಣಬಸವರೆಡ್ಡಿ, ನಾಗರಾಜ, ಪವನ್, ನಿತಿನ್, ಮಾರುತಿ, ಮಾಧವರೆಡ್ಡಿ, ನಾಗಮ್ಮ, ಯಲ್ಲಮ್ಮ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts