More

  ಬಿಎಲ್‌ಡಿಇಯಲ್ಲಿ ಮೇ 22 ರಿಂದ ತಾಂತ್ರಿಕ ಸಪ್ತಾಹ; ಪ್ರಾಚಾರ್ಯ ಡಾ.ವಿ.ಜಿ. ಸಂಗಮ

  ವಿಜಯಪುರ: ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ 22 ರಿಂದ 25 ರವರೆಗೆ ತಾಂತ್ರಿಕ ಸಪ್ತಾಹ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ.ವಿ.ಜಿ. ಸಂಗಮ ತಿಳಿಸಿದರು.

  ಪ್ರತಿ ವರ್ಷ ಸಂಸ್ಥೆಯಿಂದ ‘ಓಪನ್ ಡೇ’ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೆಎಸ್‌ಸಿಎಸ್‌ಟಿ ಪ್ರಾಯೋಜಕತ್ವ ಪಡೆದ 14 ಪ್ರಾತ್ಯಕ್ಷಿಕೆಗಳ ಜೊತೆಗೆ ಇತರ 187 ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು. ಇದರಲ್ಲಿ ವಿವಿಧ ವಿಭಾಗಗಳ ಪದವಿ ಪೂರ್ವ, ಸ್ನಾತಕೋತ್ತರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಠ್ಯಕ್ರಮದ ಭಾಗವಾಗಿ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿರುತ್ತಾರೆ. ಈ ಪ್ರಾತ್ಯಕ್ಷಿಕೆಗಳನ್ನು ವಿಜಯಪುರ ನಗರದ ಪ್ರೌಢಶಾಲೆ, ಪಿ.ಯು. ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

  ಬೆಳಗಾವಿಯ ಕ್ವಿಸ್ಟ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್‌ನ ಪ್ರಮುಖರಾದ ಪ್ರಶಾಂತ ಮರಿಕಟ್ಟಿ ಚಾಲನೆ ನೀಡಲಿದ್ದು, ನಮ್ಮ ಮಹಾವಿದ್ಯಾಲಯದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೂಪಿಸಿದ 201 ಪ್ರಾತ್ಯಕ್ಷಿಕೆಗಳು ಪ್ರದರ್ಶನಗೊಳ್ಳಲಿವೆ ಎಂದರು.

  ಪ್ರಾತ್ಯಕ್ಷಿಕೆಗಳನ್ನು ನಾವಿನ್ಯತೆ, ಸಾಮಾಜಿಕ ಕಾಳಜಿ, ಪರಿಸರ, ಅಪ್ಲಿಕೇಷನ್ ವಿಭಾಗಗಳಾಗಿ ವಿಂಗಡಿಸಲಾಗಿದೆ. ಬೈಸಿಕಲ್ ಚಾಲಿತ ನೀರಿನ ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ಧಿ ಮತ್ತು ತಯಾರಿಕೆ, ಇಲೆಕ್ಟ್ರಿಕಲ್ ವಾಹನಗಳಲ್ಲಿ ಬ್ಯಾಟರಿ ಮಾನಿಟರಿಂಗ್, ಭೂಕಂಪ ನಿರೋಧಕ ರಚನೆ ಮೊದಲಾದ ಬಗೆಯ ಪ್ರಾತ್ಯಕ್ಷಿತೆಗಳು ಪ್ರದರ್ಶನಗೊಳ್ಳಲಿವೆ ಎಂದರು.

  ಈ ತಾಂತ್ರಿಕ ಕಾರ್ಯಕ್ರಮದ ಅಂಗವಾಗಿ ಒಟ್ಟು 22 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿನ್ಯಾಸ, ನಾವಿನ್ಯತೆ, ತಾಂತ್ರಿಕ ಪೇಪರ್ ಪ್ರಸ್ತುತಿಗಳು, ಕ್ವಿಜ್, ಕೋಡಿಂಗ್ ಡೀಬಗ್ಗ್ ಮಾಡುವಿಕೆ, ಪೋಸ್ಟರ್ ಪ್ರಸ್ತುತಿಗಳು, ಐಡಿಯಾಥಾನ್ ಹಾಗೂ ಮುಂತಾದ ತಾಂತ್ರಿಕ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಈ ಎಲ್ಲ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯ ಮತ್ತು ಇತರೆ ಕೌಶಲಗಳನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ರಮವು ಇತರ ಕಾಲೇಜುಗಳ ಮಿತ್ರರೊಂದಿಗೆ ಸ್ಪರ್ಧಿಸಲು ವೇದಿಕೆ ಒದಗಿಸುತ್ತದೆ ಎಂದರು.

  ಇದೇ ಕಾರ್ಯಕ್ರಮದ ಅಡಿಯಲ್ಲಿ ರಂಗಮಂಚ ಎಂಬ ಶೀರ್ಷಿಕೆಯಡಿ ಮೇ 24 ರಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಕಲಾತ್ಮಕ ಪರಾಕ್ರಮ ಪ್ರದರ್ಶಿಸಿಲಾಗುವುದು. ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ. ಕೊಟ್ನಾಳ ಉದ್ಘಾಟಿಸಲಿದ್ದಾರೆ. ಅದೇ ತೆರನಾಗಿ ಮೇ 25 ರಂದು ಸಂಭ್ರಮ ಎನ್ನುವ ವಿಶಿಷ್ಟ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ ಎಂದರು.

  ಉಪಪ್ರಾಚಾರ್ಯ ಡಾ.ಜಿ.ವಿ. ಪಾಟೀಲ, ಡಾ.ಪಿ.ವಿ. ಮಾಳಜಿ, ಡಾ.ರಮೇಶ ಜೀರಗಾಳ, ಡಾ.ಉಣಕಿ, ಡಾ.ರವಿ ಹೊಸೂರ, ಶ್ರೀಕಾಂತ ಚೋಳಕೆ, ಡಾ.ಉಮೇಶ ದಿಕ್ಷೀತ, ಪ್ರೊ.ವೈ.ಎ. ಕುಲಕರ್ಣಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts