ಭೀಕರ ರಸ್ತೆ ಅಪಘಾತ : ಅಪ್ಪನ ಮತಎಣಿಕೆಗೆ ಹೊರಟ ಮಗ ಮತ್ತು ಇನ್ನೊಬ್ಬನ ಬಲಿ

Car Accident near haveri
Published on

ಹಾವೇರಿ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಪ್ಪನ ಮತ ಎಣಿಕೆ ಗಮನಿಸುವುದಕ್ಕೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿದ್ದ ಮಗ ಮತ್ತು ಆತನ ಜತೆಗಿದ್ದವನೊಬ್ಬ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಪಲ್ಪಿ ಹೊಡೆ ನಾಲೆಗೆ ಬಿದ್ದು ಅಪಘಾತ ಸಂಭವಿಸಿದೆ.

ಮೃತರನ್ನು ಪ್ರಕಾಶ್ ಗೌಡ ಬನ್ನಿಹಟ್ಟಿ (30) ಮತ್ತು ಸಿದ್ದನಗೌಡ ಕರೇಗೌಡ (40) ಎಂದು ಗುರುತಿಸಲಾಗಿದೆ. ಹಾವೇರಿ ತಾಲೂಕಿನಬ ಕನವಳ್ಳಿ ಶಿಬಾರ ಸಮೀಪ ದುರಂತ ಸಂಭವಿಸಿರುವಂಥದ್ದು. ನೆಗಳೂರು ಗ್ರಾಮದಿಂದ ಹಾವೇರಿಗೆ ಬರುತ್ತಿರುವ ವೇಳೆ ಪರಮೇಶ್ವರ ದೇವರಿಗೆ ಅರ್ಚನೆ ಮಾಡಿಸಿ ಪ್ರಸಾದ ತೆಗೆದುಕೊಂಡು ಹೋಗುತ್ತಿದ್ದರು.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net