More

    ರಾಯ್​ಪುರ ಸಮೀಪ ಭೀಕರ ರಸ್ತೆ ಅಪಘಾತಕ್ಕೆ 7 ಕಾರ್ಮಿಕರು ಬಲಿ

    ರಾಯ್​ಪುರ: ಛತ್ತೀಸ್​ಗಢದ ರಾಯ್​ಪುರ ಸಮೀಪ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಟ್ರಕ್​ ಮತ್ತು ಬಸ್​ ನಡುವೆ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ.

    ಕಾರ್ಮಿಕರನ್ನು ಒಡಿಶಾದ ಗಂಜಾಂನಿಂದ ಗುಜರಾತ್​ನ ಸೂರತ್​ಗೆ ಕರೆದೊಯ್ಯುತ್ತಿದ್ದ ಬಸ್​ ಮತ್ತು ಟ್ರಕ್ ರಾಯ್​ಪುರ ಸಮೀಪ ಚೇರಿ ಖೇಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿಯಾಗಿವೆ. ಏಳು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಏಳು ಕಾರ್ಮಿಕರು ಗಂಭೀರಗಾಯಗೊಂಡಿದ್ದು ಅವರನ್ನು ಸೇರಿಸಿ ಉಳಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ: ಟ್ಯಾಂಕ್ ನಿಯೋಜನೆ ಹೆಚ್ಚಿಸಿದ ಚೀನಾ, ಪ್ರತ್ಯುತ್ತರಕ್ಕೆ ಭಾರತ ಸನ್ನದ್ಧ

    ಅಪಘಾತಕ್ಕೆ ಕಾರಣವೇನು ಮತ್ತು ಇತರೆ ಮಾಹಿತಿಗಳನ್ನು ಇನ್ನಷ್ಟೇ ಸಿಗಬೇಕಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣದ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)

    ಯುವಕನ ಮುಖಕ್ಕೆ ಆ್ಯಸಿಡ್ ಎರಚಿದಳು 20ರ ಯುವತಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts