More

    ಉತ್ತಮ ಫಲಿತಾಂಶಕ್ಕೆ ಕ್ರಮವಹಿಸಿ

    ಹೊಸಪೇಟೆ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ನಗರದ ಖಾಸಗಿ ಶಾಲೆಯಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ಪೂರ್ವ ಸಿದ್ದತೆ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರ ಸಭೆ ನಡೆಯಿತು.

    ಬಿಇಒ ಎಂ.ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು 1 ರಲ್ಲಿ ಅನುತ್ತೀರ್ಣಗೊಂಡ ಹಾಗೂ ಮುಂದಿನ ತರಗತಿಗೆ ತೆರಳಲು ಅರ್ಹರಾಗದೇ ಇರುವ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಪ್ರಸ್ತುತ ಪಡೆದಿರುವ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ರಲ್ಲಿ ಹೆಚ್ಚಿನ ಫಲಿತಾಂಶ ಪಡೆಯಲು ಅವಕಾಶ ನೀಡಲಾಗಿದೆ. ಶಾಲಾ ಹಂತದಲ್ಲಿ ವಿಶೇಷ ಬೋಧನಾ ತರಗತಿಗಳನ್ನು ನಡೆಸಬೇಕು.

    ಶಾಲಾವಾರು ವಿಷಯ ವೇಳಾಪಟ್ಟಿಯನ್ನು ಸಿದ್ದಪಡಿಸಿ, ವಿಶೇಷ ಬೋಧನಾ ತರಗತಿಗಳನ್ನು ಬುಧವಾರದಿಂದ ಜು.05 ರ ವರೆಗೆ ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಉಪಹಾರ ಯೋಜನೆಯ ಸೌಲಭ್ಯದಡಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಗಳ ಹಾಜರಾತಿಯು ಮಂಡಲಿಯ ನಿಯಮಾವಳಿಗಳನ್ವಯ ಶೇ.75ಕಿಂತಲೂ ಕಡಿಮೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಪರೀಕ್ಷೆ 2 ರಲ್ಲಿ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಲು ಮಂಡಳಿಯು ಅವಕಾಶ ಕಲ್ಪಿಸಿದೆ. ಅನುತ್ತೀರ್ಣಗೊಂಡ ಮಕ್ಕಳು ಹಾಗೂ ಪಾಲಕರನ್ನು ವೈಯಕ್ತಿವಾಗಿ ಸಂಪರ್ಕಿಸಿ, ಇಲಾಖೆಯಿಂದ ಹಮ್ಮಿಕೊಂಡಿರುವ ವಿಶೇಷ ಬೊಧನಾ ತರಗತಿಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ಸೂಚಿಸಗಿದೆ ಎಂದರು.

    ಸಮನ್ವಯಾಧಿಕಾರಿಗಳಾದ ಶಿವ ಕುಮಾರ್, ಹಾಗೂ ಶ್ರೀ ಶಿವರಾಮ, ಇಸಿಒಗಳಾದ ಮಲ್ಲೇಶಪ್ಪ, ಹನುಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts