ಪ್ರತಿಷ್ಠಿತ ಕಾನ್ಸ್​​ ಚಿತ್ರೋತ್ಸವದಲ್ಲಿ ನಟ ಸಾಧು ಕೋಕಿಲ ಭಾಗಿ; ಎ.ಆರ್. ರೆಹಮಾನ್​ ಜತೆಗಿನ ನೆನಪು ಮೆಲಕು ಹಾಕಿದ ಸಾಧು

Sadhu Kokila
Published on

ಫ್ರಾನ್ಸ್​: ಕನ್ನಡ ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆ ಎಂದೇ ಖ್ಯಾತಿ ಪಡೆದಿರುವ ನಟ, ರಾಜಕಾರಣಿ ಸಾಧು ಕೋಕಿಲ ಅವರು ಫ್ರಾನ್ಸ್‌ನ ಕಾನ್ಸ್ ನಗರದಲ್ಲಿ ನಡೆಯುತ್ತಿರುವ 2024ನೇ ಸಾಲಿನ ಕಾನ್ಸ್​ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್​ ಅವರನ್ನು ಭೇಟಿ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಜೊತೆಗಿನ ಸೆಲ್ಫಿ ಪೋಸ್ಟ್​ ಮಾಡಿದ್ದಾರೆ.

ಬಹಳ ವರ್ಷಗಳ ನಡೆದ ಅಪರೂಪದ ಅನಿರೀಕ್ಷಿತ ಭೇಟಿ... ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕಾನ್ಸ್ ಚಿತ್ರೋತ್ಸವದಲ್ಲಿ ಒಂದು ಕ್ಷಣ. ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳು ನೆನಪಾದವು ಎಂದು ಬರೆದುಕೊಂಡಿದ್ದಾರೆ. ಮೇ 14ರಿಂದ ಮೇ 25ರವರೆಗೆ ಕಾನ್ಸ್ ಚಿತ್ರೋತ್ಸವ ಆಯೋಜನೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net