More

  ಆರ್​ಸಿಬಿ ಭರ್ಜರಿ ಕಮ್​ಬ್ಯಾಕ್​ ಹಿಂದಿದೆಯಾ ವಿರಾಟ್​ ಕೊಹ್ಲಿಯ ‘ಆ’ ಮಾತುಗಳು

  ಬೆಂಗಳೂರು: 17ನೇ ಆವೃತ್ತಿಯ ಐಪಿಎಎಲ್​ಅನ್ನು ಸತತ ಸೋಲುಗಳ ಮೂಲಕ ಶುರು ಮಾಡಿ ಭರ್ಜರಿ ಕಮ್​ಬ್ಯಾಕ್​ ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಮೇ 18ರಂದು ನಡೆದ ಲೀಗ್​ ಹಂತದ 68ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್​ಕಿಂಗ್ಸ್​ಅನ್ನು ಮಣಿಸುವ ಮೂಲಕ ಯಶಸ್ವಿಯಾಗಿ ಪ್ಲೇಆಫ್​ ಪ್ರವೇಶಿಸಿದೆ. ಇತ್ತ ಆರ್​ಸಿಬಿ ಭರ್ಜರಿ ಕಮ್​ಬ್ಯಾಕ್​ ಹಿಂದೆ ವಿರಾಟ್​ ಕೊಹ್ಲಿ ಆಡಿರುವ ಆ ಮಾತುಗಳು ಪ್ರಭಾವ ಬೀರಿದೆ ಎಂದು ಹೇಳಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  2024ನೇ ಆವೃತ್ತಿಯ ಆರಂಭದಲ್ಲಿ ಆಡಿದ್ದ ಮೊದಲ 8 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಸೋಲುಗಳೊಂದಿಗೆ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆಗ ತಂಡಕ್ಕೆ ಇದ್ದದ್ದು ಕೇವಲ ಶೇ 1ರಷ್ಟು ಚಾನ್ಸ್ ಮಾತ್ರ. ಅದಾದ ನಂತರ RCB ನಂತರ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಆರ್‌ಸಿಬಿಯ ಉತ್ತಮ ಪ್ರದರ್ಶನ ಪ್ಲೇಆಫ್‌ಗೆ ದಾರಿಮಾಡಿಕೊಟ್ಟಿತ್ತು.

  ಇದನ್ನೂ ಓದಿ: 8ಕ್ಕೂ ಹೆಚ್ಚು ಬಾರಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ವ್ಯಕ್ತಿ; ವಿಡಿಯೋ ವೈರಲ್

  ವೈರಲ್ ವಿಡಿಯೋ ನೋಡುವುದಾದರೆ, ಶೇ 1ರಷ್ಟು ಅವಕಾಶವಿದೆ ಮತ್ತು ಕೆಲವೊಮ್ಮೆ ಈ ಅವಕಾಶವೇ ಸಾಕಷ್ಟು ಉತ್ತಮವಾಗಿರುತ್ತದೆ. ಆದರೆ, ಆ ಶೇ ಒಂದರಷ್ಟು ಅವಕಾಶದ ಬಗ್ಗೆ ನೀವು ಹೇಗೆ ಯೋಚಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಆ ಶೇ 1ರಷ್ಟು ಅವಕಾಶವನ್ನು ನೀವು 10 ಆಗಿ ಪರಿವರ್ತಿಸಲು ಮತ್ತು 10 ಅನ್ನು ಶೇ 30ರಷ್ಟಾಗಿ ಬೆಳೆಸಲು ನೀವು ಎಲ್ಲವನ್ನೂ ಮಾಡಲು ಸಿದ್ಧರಿದ್ದೀರಾ. ಅಂತಿಮವಾಗಿ ಅದರಿಂದ ಏನಾದರೂ ಮಾಂತ್ರಿಕತೆ ಹೊರಬರಬಹುದು ಎಂದು ವಿರಾಟ್​ ಕೊಹ್ಲಿ ಹೇಳಿರುವುದನ್ನು ನೋಡಬಹುದಾಗಿದೆ.

  ಈ ಆವೃತ್ತಿಯ ಆರಂಭದಲ್ಲಿ 8 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಮಾತ್ರ ಏಕೈಕ ಗೆಲುವು ಸಾಧಿಸಿತ್ತು. 7 ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯಿತು ಮತ್ತು ಪ್ಲೇಆಫ್ ರೇಸ್‌ನಿಂದ ಅನಧಿಕೃತವಾಗಿ ಹೊರಬಿದ್ದಿತ್ತು. ಆದರೆ, ಮುಂದಿನ ಆರು ಪಂದ್ಯಗಳಲ್ಲಿ ತಂಡದ ಗೆಲುವು ಮತ್ತು ಇತರ ಫಲಿತಾಂಶಗಳು ಅವರ ಪರವಾಗಿದ್ದರಿಂದ ಬೆಂಗಳೂರು ತಂಡವು ಉತ್ತಮ ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆರ್‌ಸಿಬಿ ತಂಡವು ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ 14 ಅಂಕಗಳನ್ನು ಗಳಿಸಿತ್ತು. ಆದರೆ, ಉತ್ತಮ ನೆಟ್ ರನ್ ರೇಟ್‌ನಿಂದಾಗಿ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts