ಕನ್ನಡ ಚಿತ್ರರಂಗದ ಪೋಷಕ ನಟ ಶನಿಮಹಾದೇವಪ್ಪ ವಿಧಿವಶ

ShaniMahadevappa
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿಮಹಾದೇವಪ್ಪ ವಿಧಿವಶರಾಗಿದ್ದಾರೆ.

ಮೃತರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

550ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿರುವ ಶನಿ ಮಹಾದೇವಪ್ಪ ಅವರು ವರನಟ ಡಾ.ರಾಜ್ ಕುಮಾರ್ ಜತೆಯಲ್ಲೇ ಸುಮಾರು 150 ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಕವಿರತ್ನ ಕಾಳಿದಾಸ, ಭಕ್ತ ಕುಂಬಾರ ,ಶ್ರೀನಿವಾಸ ಕಲ್ಯಾಣ ಪ್ರಮುಖ ಚಿತ್ರಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net