More

    ಜೆಡಿಎಸ್​ ತೊರೆಯಲು ಸಾಕಷ್ಟು ಆಫರ್​ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?

    ಬೆಂಗಳೂರು: ನನಗೂ ಸಾಕಷ್ಟು ಆಫರ್ ಬಂದಿತ್ತು. ಲಿಂಗಾಯತ ಸಮುದಾಯದ ನಿಮ್ಮ ಸಮಸ್ಯೆಯನ್ನು ಜೆಡಿಎಸ್​ನಲ್ಲಿ ಯಾರೂ ಕೇಳಲ್ಲ, ನಮ್ಮ ಪಕ್ಷಕ್ಕೆ ಬನ್ನಿ ಎಂದು ಸಾಕಷ್ಟು ಮಂದಿ ನನ್ನನ್ನು ಕರೆದರು. ಆದರೆ ನಾನು ಹೋಗಲಿಲ್ಲ ಎಂದು ಮಾಜಿ ಶಾಸಕ ಶಿವಶಂಕರ್ ಹೇಳಿದರು.

    ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ನಡೆದ ಪಕ್ಷ ಸಂಘಟನಾ ಸಭೆಯಲ್ಲಿ ಮಾತನಾಡಿದ ಶಿವಶಂಕರ್​, ನಾನು ಲಿಂಗಾಯತ ಸಮುದಾಯದವ ಎಂಬ ಕಾರಣಕ್ಕೆ ನನ್ನ ಕೆಲಸ ಮಾಡಬೇಡಿ ಎಂದು ಕೆಲವರು ನಮ್ಮಲ್ಲೇ ಪಿತೂರಿ ಮಾಡಿದ್ದರು. ಹೀಗಾಗಿ ನನ್ನ ಸಮಸ್ಯೆಯನ್ನು ಯಾರೂ ಆಲಿಸಲಿಲ್ಲ. ಇನ್ಮುಂದಾದರು ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರನ್ನು ಗುರುತಿಸಬೇಕು. ಇಲ್ಲದಿದ್ದರೆ ಮುಖಂಡರು ತಮಗೆ ಯಾವ ಪಕ್ಷದಲ್ಲಿ ಅನುಕೂಲ ಆಗುತ್ತೊ ಅಲ್ಲಿಗೆ ಹೋಗ್ತಾರೆ ಎನ್ನುವ ಮೂಲಕ ಜೆಡಿಎಸ್ ವರಿಷ್ಠರನ್ನು ಎಚ್ಚರಿಸಿದರು. ಇದನ್ನೂ ಓದಿರಿ ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

    ಜೆಡಿಎಸ್​ ಅಧಿಕಾರಕ್ಕೆ ಬಂದಾಗ ಸಚಿವರು ಪಕ್ಷದ ಕಾರ್ಯಕರ್ತರನ್ನು ಮರೆತುಬಿಟ್ಟರು. ಪಕ್ಷದ ಕಾರ್ಯಕರ್ತರ ಕಷ್ಟ ಏನು? ಸಮಸ್ಯೆ ಏನು? ಎಂದು ಯಾರೊಬ್ಬರೂ ನಮ್ಮ ಸಮಸ್ಯೆಯನ್ನ ಕೇಳಲಿಲ್ಲ. ನಾನು ಶಾಸಕನಾಗಿದ್ದೆ, ಆಗ ಪಕ್ಷದ ಕಾರ್ಯಕರ್ತರ ಸಮಸ್ಯೆ ಆಲಿಸಿದ್ದೆ. ಆದರೆ ನಮ್ಮ ಸರ್ಕಾರ ಬಂದಾಗ ನಾನು ಗೆಲ್ಲಲಿಲ್ಲ. ಈ ಸಂದರ್ಭದಲ್ಲಿ ಸಚಿವರ್ಯಾರೂ ನಮ್ಮ ಸಮಸ್ಯೆಯನ್ನು ಕೇಳಿಲ್ಲ. ಇದರಿಂದ ಸಾಕಷ್ಟು ಮುಖಂಡರು ಪಕ್ಷ ಬಿಟ್ಟು ಹೋದರು ಎಂದು ಶಿವಶಿಂಕರ್​ ಬೇಸರ ವ್ಯಕ್ತಪಡಿಸಿದರು.

    ನನಗೂ ಸಾಕಷ್ಟು ಆಫರ್ ಬಂದಿತ್ತು. ಆದರೆ ಕುಮಾರಸ್ವಾಮಿ ಅವರ ಮೇಲಿನ ಪ್ರೀತಿ ಮತ್ತು ದೇವೇಗೌಡರ ಮೇಲಿನ ಅಭಿಮಾನದಿಂದ ನಾನು ಈ ಪಕ್ಷದಲ್ಲೇ ಇದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು. ಇದನ್ನೂ ಓದಿರಿ ಕುಮಾರಸ್ವಾಮಿಗಿಂತಲೂ ಮೈಸೂರಿನಲ್ಲಿದೆ ದೊಡ್ಡ ಹೈಕಮಾಂಡ್! ಅದು ಯಾವುದು ಗೊತ್ತಾ?

    ಬೇರೆ ಪಕ್ಷಕ್ಕೆ ಹೋದ ಜೆಡಿಎಸ್​ ಮುಖಂಡರನ್ನು ಮತ್ತೆ ಪಕ್ಷಕ್ಕೆ ಕರೆತನ್ನಿ. ಇಬ್ರಾಹಿಂ ಅವರ ಮನೆಗೆ ಹೋಗಿ ಅವರನ್ನು ಆಹ್ವಾನಿಸಿದರೋ ಅದೇ ರೀತಿ ಮಹಿಮಾ ಪಟೇಲ್, ನಾಡಗೌಡ ಸೇರಿದಂತೆ ಜನತಾ ಪರಿವಾರದ ಮುಖಂಡರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದರು ಸಲಹೆ ನೀಡಿದರು.

    ಜೆಡಿಎಸ್​ ಬಿಟ್ಟು ಯಾರು ಹೋಗ್ತೀರೋ ಹೋಗಿ… ಎನ್ನಬೇಡಿ. ಪಕ್ಷ ಬಿಟ್ಟು ಹೋಗುವವರ ಮನವೊಲಿಸಿ ಇಲ್ಲೇ ಉಳಿಸಿಕೊಳ್ಳಿ ಎಂದರು ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಮನವಿ ಮಾಡಿದರು.

    ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿಎಂ ನೇತೃತ್ವದ ಸಭೆಯಲ್ಲೇ ಕಣ್ಣೀರಿಟ್ಟ ಶಾಸಕಿ! ದಯವಿಟ್ಟು ಕಣ್ಣೀರು ಹಾಕ್ಬೇಡಿ.. ಸರ್ಕಾರದ ಮಾನ ಹರಾಜಾಗುತ್ತೆ…

    ನನ್ನನ್ನು ಯಾವ ನಾಯಕರೂ ಬೆಳೆಸಿಲ್ಲ… ಸಭೆಗೂ ಮುನ್ನವೇ ಸಿಡಿದೆದ್ದ ಜೆಡಿಎಸ್​ ರೆಬಲ್​ ಶಾಸಕ ಗುಬ್ಬಿ ಶ್ರೀನಿವಾಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts