ಸಿಎಂ ನೇತೃತ್ವದ ಸಭೆಯಲ್ಲೇ ಕಣ್ಣೀರಿಟ್ಟ ಶಾಸಕಿ! ದಯವಿಟ್ಟು ಕಣ್ಣೀರು ಹಾಕ್ಬೇಡಿ.. ಸರ್ಕಾರದ ಮಾನ ಹರಾಜಾಗುತ್ತೆ...

bsy roopali nayak
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಕರೆದಿದ್ದ ಬಿಜೆಪಿ ಶಾಸಕರ ಸಭೆಯಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯಕ್ ಕಣ್ಣೀರಿಟ್ಟಿದ್ದಾರೆ.

ಸಭೆಯಲ್ಲಿದ್ದ ಕೆಲ ಸಚಿವರು, 'ದಯವಿಟ್ಟು ಕಣ್ಣೀರು ಹಾಕಬೇಡಿ, ಈ ವಿಚಾರ ಹೊರಗೆ ಗೊತ್ತಾದರೆ, ಸರ್ಕಾರದ ಮಾನ ಹರಾಜಾಗುತ್ತದೆ' ಎಂದು ರೂಪಾಲಿ ನಾಯಕ್​ರಲ್ಲಿ ಮನವಿ ಮಾಡಿದರೆಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುಲು ಆ ಐವರು ಕಾರಣ, ಹಾಗಾಗಿ ಈಶ್ವರಪ್ಪಗೆ ಸಿಎಂ ಗಾದಿ ಕೊಡಿ…

ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ದೂರುಗಳಿದ್ದಕ್ಕೆ ಅವರನ್ನ ಅಮಾನತು ಮಾಡಿಸಲಾಗಿತ್ತು. ಆದರೆ ಆ ಅಧಿಕಾರಿ ಪ್ರಭಾವ ಬಳಸಿ ಅಮಾನತು ರದ್ದು ಪಡಿಸಿಕೊಂಡು ಮತ್ತೆ ಅದೇ ಹುದ್ದೆಗೆ ಬಂದು ಶಾಸಕಿಗೆ ಸಡ್ಡು ಹೊಡೆದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೂಪಾಲಿ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕರ ಮಾತಿಗೆ ಬೆಲೆ ಇಲ್ಲ. ಈ ರೀತಿಯಾದರೆ ಶಾಸಕರಿಗೆ ಕ್ಷೇತ್ರದಲ್ಲಿ ಏನು ಬೆಲೆ ಉಳಿಯಲಿದೆ? ಯಾವ ಮುಖವಿಟ್ಟುಕೊಂಡು ಓಡಾಡುವುದು? ಎಂದು ಕಣ್ಣೀರು ಹಾಕಿದ್ದಾರೆ.

ಆಗ ಸಭೆಯಲ್ಲಿದ್ದ ಇತರ ಹಿರಿಯ ಶಾಸಕರು ಸಹ ರೂಪಾಲಿ ಮಾತಿಗೆ ದನಿಗೂಡಿಸಿ, 'ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ದಂಧೆಗೆ ಮೊದಲು ಕಡಿವಾಣ ಹಾಕಿ ಶಾಸಕರ ಮರ್ಯಾದೆ ಉಳಿಸಿ' ಎಂದು ಒತ್ತಾಯ ಮಾಡಿದರೆಂದು ಮೂಲಗಳು ಖಚಿತ ಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net