ಗರ್ಲ್​ಫ್ರೆಂಡ್​ ಮಲಗಿದ ಬಳಿಕ ಮತ್ತೊಂದು ಯುವತಿ ಮೇಲೆ ಕಣ್ಣು: ಪ್ಯಾಂಟ್​ ಜಿಪ್​ ಓಪನ್, ಸಿಕ್ಕಿಬಿದ್ದ ಯುವಕ

Puducherry Bus Issue
Published on

ಪುದುಚೇರಿ: ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನೊಬ್ಬನಿಗೆ ಪುದುಚೇರಿ ಮೂಲದ ಡಿಲಕ್ಸ್​ ಬಸ್ ಡ್ರೈವರ್​ ಮತ್ತು ಕಂಡಕ್ಟರ್​ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.

ತನ್ನ ಗರ್ಲ್​ಫ್ರೆಂಡ್​ ಜತೆ ಬಸ್​ ಏರಿದ್ದ ಯುವಕ ಆಕೆಯನ್ನು ಮಲಗಿಸಿದ ಬಳಿಕ ಇನ್ನೊಂದು ಯುತಿಯ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತೆಯು ತಮಿಳುನಾಡಿನ ತಿಂಡಿವನಂ ಮೂಲದವಳು. ಸಂತ್ರಸ್ತೆಯು ಕೂಗಿಕೊಂಡ ಬಳಿಕ ಯುವಕನಿಗೆ ಡ್ರೈವರ್​ ಮತ್ತು ಕಂಡಕ್ಟರ್​ ಥಳಿಸಿದ್ದಾರೆ.

ಆರೋಪಿಯನ್ನು ಶರತ್​ ಎಂದು ಗುರುತಿಸಲಾಗಿದೆ. ಇಡೀ ಘಟನೆಯನ್ನು ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಬಳಿಕ ಉರುಳಾಯನಪೇಟೆಯ ವ್ಯಾಪ್ತಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮೈಮುಟ್ಟಲು ಶುರು ಮಾಡಿದ

ಸಂತ್ರಸ್ತೆಯು ಬೆಂಗಳೂರಿಗೆ ತಲುಪಲು ಪುದುಚೇರಿಯಿಂದ ಸ್ಲೀಪರ್​ ಕೋಚ್​ ಬಸ್​ ಏರಿದ್ದಳು. ಬಸ್​ ಸ್ವಲ್ಪ ದೂರ ಪ್ರಯಾಣಿಸಿದ ಕೂಡಲೇ ಹಿಂದಿನ ಸೀಟಿನಲ್ಲಿದ ಶರತ್​ ಮೈಮುಟ್ಟಲು ಶುರು ಮಾಡಿದ. ಆರಂಭದಲ್ಲಿ ಆಕಸ್ಮಿಕ ಅಂತಾ ಸಂತ್ರಸ್ತೆ ಸುಮ್ಮನಾಗಿದ್ದಳು. ಆದರೆ, ಆರೋಪಿ ಮತ್ತೆ ಅನುಚಿತವಾಗಿ ಸ್ಪರ್ಶಿಸಿ ಕ್ಷಮೆ ಕೋರಿದ್ದ. ಆಗಲೂ ಸಂತ್ರಸ್ತೆ ಸುಮ್ಮನಾಗಿದ್ದಳು. ಇದಾದ ಬಳಿಕ ಆರೋಪಿ ತನ್ನ ಬಟ್ಟೆಗಳನ್ನು ತೆಗೆದು ಸಂತ್ರಸ್ತೆಯಲ್ಲಿ ತಬ್ಬಿಕೊಳ್ಳಲು ಯತ್ನಿಸಿದ್ದಾನೆ.

ಧರ್ಮದೇಟು

ಆತನ ವರ್ತನೆಯಿಂದ ಶಾಕ್​ ಆದ ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದಾಳೆ. ಇತ್ತ ಆರೋಪಿ ಏನೂ ಮಾಡಿಯೇ ಇಲ್ಲ ಎನ್ನುವಂತೆ ಬಸ್​ನಿಂದ ಕೆಳಗೆ ಇಳಿಯಲು ಯತ್ನಿಸಿದ್ದಾನೆ. ಈ ವೇಳೆ ಬಸ್​ನಲ್ಲಿದ್ದ ಡ್ರೈವರ್​ ಮತ್ತು ಕಂಡಕ್ಟರ್​ ಆರೋಪಿಯ ಬಳಿ ಬಂದು ಧರ್ಮದೇಟು ನೀಡಲು ಶುರು ಮಾಡಿದರು. ಈ ವೇಳೆ ಎಚ್ಚರಗೊಂಡ ಆರೋಪಿ ಶರತ್​ ಗರ್ಲ್​ಫ್ರೆಂಡ್​ ಆತನಿಗೆ ಹೊಡೆಯದಂತೆ ತಡೆಯಲು ಯತ್ನಿಸಿದಳು. ಆರೋಪಿಗೆ ಹೊಡೆಯುವ ಮುನ್ನ ಬಸ್​ ಸಿಬ್ಬಂದಿಯೊಬ್ಬರು ಆತನ ಗರ್ಲ್​ಫ್ರೆಂಡ್​ ಕಪಾಳಕ್ಕೆ ಬಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಂತ್ರಸ್ತೆ ತನ್ನ ಕಷ್ಟವನ್ನು ವಿವರಿಸುತ್ತಿರುವ ಹಿನ್ನೆಲೆ ಧ್ವನಿಯನ್ನು ಕೇಳಬಹುದು.

ಪ್ಯಾಂಟ್​ ಜಿಪ್​ ಓಪನ್

ಆರೋಪಿಯ ಪ್ಯಾಂಟ್​ ಜಿಪ್​ ಓಪನ್​ ಆಗಿತ್ತು. ಇದೀಗ ಜಿಪ್​ ಹಾಕಿಕೊಂಡಿದ್ದಾನೆ ಎಂದು ವಿಡಿಯೋದಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ. ಹೊಡೆತವನ್ನು ಸಹಿಸದ ಆರೋಪಿ, ಕ್ಷಮಿಸಿ ಎಂದು ಬಸ್​ ಸಿಬ್ಬಂದಿ ಬಳಿ ಅಂಗಲಾಚಿದ್ದಾನೆ. ಆದರೂ ಬಿಡದೆ ಆತನನ್ನ ಮನಬಂದಂತೆ ಥಳಿಸಿ, ಕಾಲಿನಿಂದ ಒದ್ದು ಹಾಕಿದರು. ಬಸ್​ನಿಂದ ಕೆಳಗೆ ಇಳಿಯುವಾಗಲೂ ಇಬ್ಬರ ಮೇಲೆ ಬಸ್​ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.

ವಿಡಿಯೋ ವೈರಲ್ ಆದ ತಕ್ಷಣ ಉರುಳಾಯನಪೇಟೆ ಠಾಣೆಯ ಪೊಲೀಸ್ ಅಧಿಕಾರಿಗಳು ಬಸ್​ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಶರತ್‌ನನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net