More

    ಬಿಜೆಪಿಗೆ ಪೂರ್ಣ ಜನಾದೇಶ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ

    | ಪ್ರಕಾಶ ಎಸ್. ಶೇಟ್/ ಸಂತೋಷ ವೈದ್ಯ ಹುಬ್ಬಳ್ಳಿ

    ಆಡಳಿತ ವಿರೋಧಿ ಅಲೆ ಎಲ್ಲಿದೆ? ಇದೆಲ್ಲ ಕಾಂಗ್ರೆಸ್​ನ ಸೃಷ್ಟಿ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಾಂಗ್ರೆಸ್ ಬೊಬ್ಬೆ ಹಾಕುತ್ತಿದೆ. ತನಿಖೆ ಮಾಡುತ್ತೇವೆ ಸಾಕ್ಷ್ಯ ನೀಡಿ ಎಂದು ಕೇಳಿದರೆ, ಈವರೆಗೆ ಒಂದೇ ಒಂದು ಸೂಕ್ತ ದಾಖಲೆ ನೀಡಲು ಇವರಿಂದ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಬೇಲ್ ಪಡೆದು ಓಡಾಡುತ್ತಿದ್ದಾರೆ. ಇಂಥ ಸ್ಥಿತಿ ಬಿಜೆಪಿ ಸಚಿವರಿಗಿಲ್ಲವಲ್ಲ? ರಾಜ್ಯದ ಪ್ರಜ್ಞಾವಂತರು ಮತದಾರರು. ಯಾರು ಭ್ರಷ್ಟರು? ಯಾರಿಂದ ದೇಶಕ್ಕೆ, ರಾಜ್ಯಕ್ಕೆ ಒಳಿತಾಗುತ್ತದೆ ಎನ್ನುವುದನ್ನು ತೀರ್ಮಾನಿಸಿ ಮತದಾನ ಮಾಡುತ್ತಾರೆ. ರಾಮಕೃಷ್ಣ ಹೆಗಡೆ, ದೇವರಾಜ ಅರಸು ನಂತರದಲ್ಲಿ ಮತ್ತೊಂದು ಇತಿಹಾಸ ರಾಜ್ಯದಲ್ಲಿ ಸೃಷ್ಟಿಯಾಗುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಫೋನ್​​​ ನಂಬರ್​ಗಾಗಿ ಶಾಲಾ ವಿದ್ಯಾರ್ಥಿನಿಯ ಹಿಂದೆ ಬಿದ್ದ ಕಾನ್ಸ್​ಟೆಬಲ್​! ನಂತರ ನಡೆದಿದ್ದಿಷ್ಟು…

    ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಶನಿವಾರ ‘ವಿಜಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕರ್ನಾಟಕದ ರಾಜಕೀಯ ಇತಿಹಾಸ ಮೆಲುಕು ಹಾಕಿದರು. 1988ರ ನಂತರದಲ್ಲಿ ಸತತ ಎರಡು ಬಾರಿ ಯಾವುದೇ ಸರ್ಕಾರವನ್ನು ಜನ ಅಧಿಕಾರಕ್ಕೆ ತಂದಿಲ್ಲ. ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಅವರಿಗೆ ಈ ಭಾಗ್ಯ ಒದಗಿತ್ತು. ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಿದ್ದರಿಂದ ಜನ ದೇವರಾಜ ಅರಸು ಅವರನ್ನು ಮರು ಆಯ್ಕೆ ಮಾಡಿದ್ದರು. ಅಧಿಕಾರ ವಿಕೇಂದ್ರೀಕರಣ ಹಾಗೂ ಅಭಿವೃದ್ಧಿ ಕಾರ್ಯದಿಂದಾಗಿ ರಾಮಕೃಷ್ಣ ಹೆಗಡೆ ಎರಡನೇ ಬಾರಿ ಆಯ್ಕೆಯಾಗಿದ್ದರು. ನಾನು ಇವರಿಬ್ಬರ ಮಾರ್ಗದಲ್ಲಿ ಹೊರಟಿದ್ದೇನೆ. ಮೂರನೇ ಯಶಸ್ಸು ನನ್ನದಾಗಲಿದೆ. ಇತಿಹಾಸ ಸೃಷ್ಟಿಯಾಗಲಿದೆ ಎಂದರು.

    ಮಸಿ ಬಳಿಯುವ ಯತ್ನ: ಬಿಜೆಪಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಕೈಗೇ ಕಪ್ಪು ಮಸಿ ಅಂಟಿದೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ಅಧಿಕಾರಕ್ಕೆ ಬರುತ್ತೇವೆ ಎನ್ನುವ ಯಾವ ಗ್ಯಾರಂಟಿಯೂ ಕಾಂಗ್ರೆಸ್​ಗೆ ಇಲ್ಲ. ಹೀಗಾಗಿ ಸುಳ್ಳು ಗ್ಯಾರಂಟಿಗಳ ಮುಖೇನ ಜನರನ್ನು ಮರುಳು ಮಾಡಲು ಹೊರಟಿದೆ. ಈ ಗ್ಯಾರಂಟಿಗಳೆಲ್ಲ ಬೋಗಸ್ ಎನ್ನುವುದು ಜನರಿಗೆ ಗೊತ್ತು.

    ಕೋವಿಡ್​ನಿಂದ ರಾಜ್ಯ ಚೇತರಿಸಿಕೊಳ್ಳಲಾಗದು ಎಂದು ಕಾಂಗ್ರೆಸ್ಸಿಗರು ಲೆಕ್ಕಿಸಿದ್ದರು. ಆದರೆ, ಆರ್ಥಿಕವಾಗಿ ರಾಜ್ಯ ಸದೃಢವಾಯಿತು. ಉಳಿತಾಯದ ಬಜೆಟ್ ಮಂಡಿಸಿದೆವು. ಹೊಸ ಕಾರ್ಯಕ್ರಮವನ್ನು ಮಹಿಳೆಯರಿಗೆ, ಬಡವರಿಗೆ, ಕಾರ್ವಿುಕರಿಗೆ, ವಿದ್ಯಾರ್ಥಿಗಳಿಗೆ ನೀಡಿದೆವು. ಸಾಮಾಜಿಕ ನ್ಯಾಯ ಕೊಡಬೇಕೆನ್ನುವ ಉದ್ದೇಶದಿಂದ ಪ್ರಮುಖವಾಗಿ ಎಸ್​ಸಿ-ಎಸ್​ಟಿ ಮೀಸಲಾತಿ ಮಾಡಿದ ಪರಿಣಾಮ ಕಾಂಗ್ರೆಸ್​ನ ಮತ ಬ್ಯಾಂಕ್ ಕೈತಪ್ಪಿ ಹೋಯಿತು. ಇದರಿಂದ ಭ್ರಮನಿರಸನಗೊಂಡು ಆಧಾರವಿಲ್ಲದ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

    ಪೊಲೀಸ್ ನೇಮಕಾತಿಯ ಕಿಂಗ್​ಪಿನ್ ಕಾಂಗ್ರೆಸ್. ನೀರಾವರಿ ಇಲಾಖೆಯಲ್ಲಿ, ದಿಂಬು-ಹಾಸಿಗೆಯಲ್ಲಿ ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್. ಗುತ್ತಿಗೆದಾರರ ಸಂಘದ ಮುಖೇನ ಶೇ. 40 ಕಮೀಷನ್​ನ ಸುಳ್ಳು ಆರೋಪ ಮಾಡಿಸಿದ್ದೇ ಅವರು. ಈ ಪಕ್ಷದ ಮೇಲೆ 60ಕ್ಕೂ ಹೆಚ್ಚು ಕೇಸ್​ಗಳಿದ್ದವು. ಸ್ವತಃ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಮೇಲೆಯೇ ಭ್ರಷ್ಟಾಚಾರದ ಆರೋಪವಿತ್ತು. ಈ ಎಲ್ಲ ಕೇಸ್ ಮುಚ್ಚಿ ಹಾಕಲು ಲೋಕಾಯುಕ್ತ ಬಲಹೀನಗೊಳಿಸಿ ಎಸಿಬಿ ರಚಿಸಲಾಯಿತು. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ಟೀಕಿಸಿದರು.

    ಸಿಎಂ ಬೊಮ್ಮಾಯಿ ಕಿಡಿನುಡಿ

    * ತನಿಖೆಗೆ ಸಾಕ್ಷ್ಯ ನೀಡದ ಕಾಂಗ್ರೆಸ್
    * ಬೇಲ್ ಮೇಲಿದ್ದಾರೆ ಕಾಂಗ್ರೆಸ್ ನಾಯಕರು
    * ಬಿಜೆಪಿ ಸಚಿವರಿಗಿಲ್ಲ ಇಂಥ ಸ್ಥಿತಿ
    * ಜನರಿಗೆ ಕೈನ ಸುಳ್ಳು ಗ್ಯಾರಂಟಿ ನೀಡುತ್ತಿದೆ
    * ಮತಬ್ಯಾಂಕ್ ತಪ್ಪಿದ್ದಕ್ಕೆ ಭ್ರಮನಿರಸನಗೊಂಡ ಕೈ
    * ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ

    ಜನರ ಭಾವನೆ ಮುಖ್ಯ

    ಎರಡ್ಮೂರು ತಿಂಗಳ ಹಿಂದೆ ನಡೆಸಿದ ಚುನಾವಣೆ ಸರ್ವೆಗಳು ಲೆಕ್ಕಕ್ಕೆ ಬಾರದು. ಈಗ ಮತದಾನದ ದಿನ ಹತ್ತಿರ ಬಂದಾಗ ಜನರ ಭಾವನೆ ಹೇಗಿದೆ ಎನ್ನುವುದು ಪ್ರಮುಖವಾಗುತ್ತದೆ. ಜನರಲ್ಲಿ ಬಿಜೆಪಿ ಬಗ್ಗೆ ಉತ್ಸಾಹ ಕಾಣುತ್ತಿದ್ದೇವೆ. ರ್ಯಾಲಿಗಳಲ್ಲಿ ತಾವಾಗಿಯೇ ಬಂದು ಬಿಜೆಪಿ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಬಿಜೆಪಿಯನ್ನು ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬರಲು ‘ಗೇಮ್ ಚೇಂಜರ್’ ಆಗಲಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಯುವಕರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ. ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತೇವೆ ಎಂದರು.

    ಬೇಸರದಲ್ಲಿ ಮಾಜಿ ಸಂಸದೆ ರಮ್ಯಾ; ನಟಿಯ ಮುದ್ದಿನ ‘ಚಾಂಪ್’ ಇನ್ನಿಲ್ಲ

    ಜಲಸುರಂಗ, ಅಚ್ಚರಿ ತರಂಗ: ಹೂಗ್ಲಿ ನದಿಯಡಿ ದೇಶದ ಮೊದಲ ಮೆಟ್ರೋ ಮಾರ್ಗ

    ಒಂದೇ ಜಿಲ್ಲೆಯಲ್ಲಿ 3 ವರ್ಷವಿದ್ದ ಪೊಲೀಸರ ವರ್ಗ; ಚುನಾವಣಾ ಕರ್ತವ್ಯ ನಿಯೋಜನೆಗೆ ಮಾರ್ಗಸೂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts