

ಬೆಂಗಳೂರು: ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ನಟಿ, ಮಾಜಿ ಸಂಸದೆ ರಮ್ಯಾ ಸದ್ಯ ಬೇಸರದಲ್ಲಿದ್ದಾರೆ. ಏಕೆಂದರೆ ಅವರ ಮುದ್ದಿನ ಚಾಂಪ್ ಇನ್ನಿಲ್ಲ. ಈ ಕುರಿತು ಅವರೇ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಮುದ್ದಿನ ನಾಯಿ ನಾಪತ್ತೆಯಾಗಿದ್ದು, ಅವನನ್ನ ಹುಡುಕಲು ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರಮ್ಯಾ, ಅದಾದ ಆರೇ ಗಂಟೆಗಳಲ್ಲಿ ನಾಯಿ ಸಾವಿಗೀಡಾದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ. 'ಚಾಂಪ್ ಇನ್ನಿಲ್ಲ, ಅವನನ್ನು ಹುಡುಕಿದ್ದಾಗಿ ಧನ್ಯವಾದಗಳು' ಎಂದು ಅವರು ಹೇಳಿದ್ದಾರೆ.
ಚಾಂಪ್ ಎಂಬ ಹೆಸರಿನ ಕಪ್ಪು ಬಣ್ಣದ ನಾಯಿ ಕಣ್ಮರೆಯಾಗಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಕಾಣೆಯಾಗಿರುವ ನಾಯಿಯನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಮೇ 6ರಂದು ಕೊನೆಯ ಬಾರಿಗೆ ಪ್ರೀತಿಯ ಚಾಂಪ್ನನ್ನು ನೋಡಿದ್ದೇನೆ. ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರೋಡ್ ಬೆಂಗಳೂರಿನಿಂದ ನಾಪತ್ತೆಯಾಗಿದೆ. ನಾಯಿಯ ಬಗ್ಗೆ ಮಾಹಿತಿ ಸಿಕ್ಕಿದರೆ 7012708137 ಸಂಖ್ಯೆಯನ್ನು ಸಂಪರ್ಕಿಸಿ ಎಂದು ಇದಕ್ಕೂ ಮೊದಲು ರಮ್ಯಾ ಬರೆದುಕೊಂಡಿದ್ದರು.