More

    ಬಾಜಿ ಕಟ್ಟುವವರಿದ್ದರೆ ಬನ್ನಿ! ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರು, ಡಂಗುರ ಸಾರಿಸಿ ಪಂಥಾಹ್ವಾನ

    ದಾವಣಗೆರೆ: ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಕೇವಲ ಒಂದು ದಿನವಷ್ಟೇ ಆಗಿದೆ. ಫಲಿತಾಂಶಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಇದರ ನಡುವೆ ಯಾರು ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಚುನಾವಣಾ ಬೆಟ್ಟಿಂಗ್​ ಎಲ್ಲೆಡೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ದಾವಣಗೆರೆಯಲ್ಲಿ ಡಂಗುರ ಸಾರುವ ಮೂಲಕವೇ ಬಾಜಿ ಕಟ್ಟಲು ಪಂಥಾಹ್ವಾನ ನೀಡಿರುವುದು ಎಲ್ಲರ ಗಮನ ಸೆಳೆದಿದೆ.

    ಎರಡು ಎಕರೆ ಜಮೀನು

    ಬೆಣ್ಣೆ ನಗರಿ ದಾವಣಗೆರೆಯಲ್ಲಿ ಚುನಾವಣಾ ಬೆಟ್ಟಿಂಗ್ ಜೋರಾಗಿದ್ದು, ಬಾಜಿ ಕಟ್ಟುವವರಿದ್ದರೆ ಬನ್ನಿ ಅಂತ ಡಂಗುರ ಸಾರಿ ಪಂಥಾಹ್ವಾನ ನೀಡಲಾಗಿದೆ. ಈ ಘಟನೆ ಹೊನ್ನಾಳಿ ತಾಲೂಕಿನ ಚಿಕ್ಕಗೋಣಿಗೆರೆಯಲ್ಲಿ ನಡೆದಿದೆ. ಎರಡು ಎಕರೆ ಜಮೀನು ಬಾಜಿಗಿಟ್ಟು ಆಹ್ವಾನ ನೀಡಲಾಗಿದೆ.

    ದೇವಸ್ಥಾನಕ್ಕೆ ಬರುವಂತೆ ಪಂಥಾಹ್ವಾನ

    ಹೊನ್ನಾಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ಗೆಲ್ಲುತ್ತಾರೆ ಅಂತ 2 ಎಕರೆ ಜಮೀನನ್ನು ಹೊನ್ನಾಳಿ ತಾಲೂಕಿನ ಚಿಕ್ಕಗೋಣಿಗೆರೆ ಗ್ರಾಮದ ಹೆಬ್ಬಾರ ನಾಗಣ್ಣ ಎಂಬುವರು ಬಾಜಿಗಿಟ್ಟಿದ್ದಾರೆ. ಡಂಗುರ ಸಾರಿಸಿ ಚಿಕ್ಕಗೋಣಿಗೆರೆ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬರುವಂತೆ ಗ್ರಾಮದ ಬೀದಿ ಬೀದಿಯಲ್ಲಿ ಡಂಗುರ ಸಾರಿಸಿ ಪಂಥಾಹ್ವಾನ ನೀಡಿದ್ದಾರೆ.

    ಇದನ್ನೂ ಓದಿ: ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅಸಮಾಧಾನ

    ಲಕ್ಷಾಂತರ ರೂ. ಬಾಜಿ

    ಜಿಲ್ಲಾದ್ಯಂತ 5 ಕೋಟಿಗೂ ಅಧಿಕ ಬೆಟ್ಟಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ. 500, 1000, 5000 ಮತ್ತು 10000 ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ. ಅಡಿಕೆ ತೋಟ, ಭತ್ತದ ಗದ್ದೆ, ಸೈಟ್ ಅನ್ನು ಜನರು ಬಾಜಿ ಕಟ್ಟುತ್ತಿದ್ದಾರೆ. ಕಾಂಗ್ರೆಸ್​, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ.

    ಜಿದ್ದಾಜಿದ್ದಿನ ಕ್ಷೇತ್ರಗಳಾದ ಚನ್ನಗಿರಿ-ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿದೆ. ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ, ಅಜಯ ಕುಮಾರ್ ಗೆಲ್ತಾರೆ ಅಂತ ಬೆಂಬಲಿಗರು ಬೆಟ್ಟಿಂಗ್ ಕಟ್ಟಿದ್ದಾರೆ. ಚನ್ನಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಡಾಳು ಮಲ್ಲಿಕಾರ್ಜುನ ಪರ ಬೆಟ್ಟಿಂಗ್‌ ಜೋರು ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

    ISSF ವರ್ಲ್ಡ್​ಕಪ್​: ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ

    ಪೋಷಕರ ಬೇಜವಾಬ್ದಾರಿಗೆ ಪೊಲೀಸರು ಶಾಕ್; ಮಗಳು ಕಿಡ್ನಾಪ್ ಆಗಿದ್ದಾಳೆ ಎಂದುಕೊಂಡು ದೂರು!

    ಪೋಷಕರ ಬೇಜವಾಬ್ದಾರಿ; ಮನೆಯಲ್ಲಿ ಮಲಗಿದ್ದ ಮಗಳಿಗಾಗಿ ಪೊಲೀಸರ ಜತೆ ಊರೆಲ್ಲಾ ಹುಡುಕಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts