More

    ಪೋಷಕರ ಬೇಜವಾಬ್ದಾರಿಗೆ ಪೊಲೀಸರು ಶಾಕ್; ಮಗಳು ಕಿಡ್ನಾಪ್ ಆಗಿದ್ದಾಳೆ ಎಂದುಕೊಂಡು ದೂರು!

    ಬೆಂಗಳೂರು: ಇಲ್ಲೊಂದು ಪ್ರಕರಣದಲ್ಲಿ ಕೆ.ಆರ್.ಪುರಂ ಪೊಲೀಸರಿಗೆ ಪೋಷಕರ ದೂರು ತಲೆನೋವಾಗಿ ಬಿಟ್ಟಿತ್ತು. ನಮ್ಮ ಮಗು ಕಿಡ್ನಾಪ್ ಆಗಿದೆ ಎಂದು ಮೀನಾ ದಂಪತಿ ದೂರು ನೀಡಿದ್ದರು.

    ಈ ಘಟನೆ ಕೆ.ಆರ್.ಪುರಂ ಬಳಿಯ ಜನತಾ ಕಾಲೋನಿಯಲ್ಲಿ ನಡೆದಿದ್ದು ನಿನ್ನೆ ರಾತ್ರಿ 7.30 ಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನ್ನ 6 ವರ್ಷದ ಮಗಳು ಮನೆ ಮುಂದೆ ಆಟವಾಡುತ್ತಿದಾಗ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ ಕೆ.ಆರ್.ಪುರಂ ಪೊಲೀಸರು ಮಗವಿಗಾಗಿ ಹುಡುಕಾಟ ನಡೆಸಿದ್ದಾರೆ.

    ಸಬ್ ಇನ್ಸ್ ಪೆಕ್ಟರ್ ರಮ್ಯ ಹಾಗೂ ಸಿಬ್ಬಂದಿ ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದು ಬಳಿಕ ಕಿಡ್ನಾಪ್ ಆದ ಸ್ಥಳದಲ್ಲಿ ಸುಳಿವು ಹುಡುಕಲು ತೆರಳಿದ್ದಾರೆ.

    ಬಟ್ಟೆ ರಾಶಿ ಕೆಳಗೆ ಮಲಗಿದ್ದ ಮಗು!

    ಮಕ್ಕಳು ತಾವಾಗಿಯೇ ಅಡಗಿದ್ದು ಈ ಸಂದರ್ಭ ಮಗು ಕಾಣೆಯಾಗಿದೆ ಎಂದು ದೂರು ಕೊಟ್ಟರೆ ಒಂದು ಮಾತು. ಆದರೆ ಕಣ್ಣಮುಂದಿರುವ ಮಗುವಿನ ಮೇಲೆಯೇ ಬಟ್ಟೆಯ ರಾಶಿ ಹಾಕಿ ಮಗು ಕಾಣೆ ಆಗಿದೆ ಎಂದರೆ ಏನು ಹೇಳಬೇಕು? ಇದೇ ಇಲ್ಲೂ ನಡೆದದ್ದು

    ಕಿಡ್ನಾಪ್ ಆದ ಸ್ಥಳದಲ್ಲಿ ಸುಳಿವು ಹುಡುಕಲು ತೆರಳಿದ್ದ ವೇಳೆ ಮನೆಯಲ್ಲಿ ಹುಡುಕಾಟ ಮಾಡುವಾಗ ಬಟ್ಟೆ ಕೆಳಗೆ ಇದ್ದ 6 ವರ್ಷದ ಮಗಳು ಪತ್ತೆಯಾಗಿದ್ದಾಳೆ! ನಂತರ ವಿಚಾರಣೆ ಮಾಡಿದಾಗ ಮಗಳು ಮಲಗಿದ್ದ ಸಂದರ್ಭ ತಾಯಿ ಒಣಗಿದ್ದ ಬಟ್ಟೆಯನ್ನು ಮಗುವಿನ ಮೇಲೆ ತಂದು ಹಾಕಿದ್ದರು ಎಂದು ಬೆಳಕಿಗೆ ಬಂದಿದೆ. ತನ್ನ ಮೇಲೆ ಬಟ್ಟೆ ಹಾಕಿದ್ದರೂ ಮಗು ಮಾತ್ರ ಚೆನ್ನಾಗಿ ನಿದ್ರಿಸುತ್ತಿತ್ತು. ಈ ಸಂದರ್ಭದಲ್ಲಿ ಎಚ್ಚರಗೊಡಿರಲಿಲ್ಲ.

    ಹೀಗಾಗಿ ಗಾಬರಿಯಿಂದಾಗಿ ಕೆಲಕಾಲ ಆತಂಕ ಸೃಷ್ಠಿಯಾಗಿತ್ತು. ಒಟ್ಟಿನಲ್ಲಿ ಪೋಷಕರ ಬೇಜಾವಾಬ್ದಾರಿಗೆ ಪೊಲೀಸರು ಸುಸ್ತಾಗಿ ಹೋಗಿದ್ದಂತೂ ಸತ್ಯ. ಮಗಳು ಸಿಕ್ಕ ಬಳಿಕ ಪೋಷಕರು ನಿರಾಳರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts