More

    ಬಾಲ್ಯವಿವಾಹ ವಿರೋಧಿಸಿ..ಪಾಲಕರಿಗೆ ಕೀರ್ತಿ ತಂದ ಹುಡುಗಿ!

    ಹೈದರಾಬಾದ್​​: ಬಾಲ್ಯವಿವಾಹ ಮಾಡಿಕೊಡಲು ಮುಂದಾಗಿದ್ದ ಪಾಲಕರ ವಿರುದ್ಧ ಸೆಟೆದು ನಿಂತ ಹುಡುಗಿ ಇಂಟರ್‌ಮೀಡಿಯೇಟ್‌ ಫಲಿತಾಂಶದಲ್ಲಿ ರ್‍ಯಾಂಕ್​ ಪಡೆದು ಕೀರ್ತಿ ತಂದಿದ್ದಾಳೆ.

    ಇದನ್ನೂ ಓದಿ: ಗ್ರಾಹಕರೇ ಎಚ್ಚರ.. ಮೇ ತಿಂಗಳಲ್ಲಿ ಬದಲಾಗಲಿರುವ ಬ್ಯಾಂಕ್ ನಿಯಮಗಳಿವು!

    ತೆಲಂಗಾಣದ ಭದ್ರಾದ್ರಿ ಕೋಟ ಗುಡೆಂ ಜಿಲ್ಲೆಯ ಬಾನೋತು ಕುಸುಮಾ ಕುಮಾರಿ ಮದುವೆ ವಿರೋಧಿಸಿ ಓದಿನಲ್ಲಿ ತಲ್ಲೀನಳಾಗಿ ಇಂಟರ್‌ಮೀಡಿಯೇಟ್‌ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್​ ಗಳಿಸಿ ಗಮನಸೆಳೆದಿದ್ದಾಳೆ.

    ಈಕೆ ಓದುತ್ತೇನೆ ಎಂದು ಹೇಳಿದರೂ, ಕೇಳದೆ ಪಾಲಕರು ಮದುವೆ ನಿಶ್ಚಯಿಸಿದ್ದರು. ಮದುವೆ ನಿಲ್ಲಿಸುವ ಉದ್ದೇಶದಿಂದ 1098ಕ್ಕೆ ದೂರು ನೀಡಿದ್ದಳು. ಇದರ ಪರಿಣಾಮ ಮದುವೆ ನಿಂತುಹೋಗಿ ಮಣಗೂರಿನ ಚೈಲ್ಡ್​ಹೋಂಗೆ ಕಳೂಹಿಸಲಾಗಿತ್ತು. ಆ ನಂತರ ಮುಲಕಪಲ್ಲಿಯನ್ನು ಕಸ್ತೂರಬಾ ಗಾಂಧಿ ಬಾಲಕಿಯರ ಸಂಸ್ಥೆಗೆ (ಕೆಜಿಬಿವಿ) ಸೇರಿಸಲಾಯಿತು. ಅಲ್ಲಿಯೇ ಓದಿ ಇತ್ತೀಚೆಗೆ ಬಿಡುಗಡೆಯಾದ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾಳೆ.
    ಈಕೆ 1ಸಾವಿರಕ್ಕೆ 978 ಅಂಕ ಪಡೆಯುವ ಮೂಲಕ ಮದುವೆ ಮಾಡಿ ಗಂಡನ ಮನೆಗೆ ಕಳೂಹಿಸಬೇಕೆಂದಿದ್ದ ಪಾಲಕರಿಗೆ ಸೆಡ್ಡು ಹೊಡೆದು ಸಾಧಕಿಯಾಗಿ ಹೊರಹೊಮ್ಮಿದ್ದಾಳೆ.

    ‘ಆ ಸಮಯದಲ್ಲಿ ನಾನು ಆ ಚಟಕ್ಕೆ ಬಿದ್ದಿದ್ದೆ’: ಸ್ಟಾರ್ ಹೀರೋಯಿನ್ ಬಿಚ್ಚಿಟ್ಟ ಸತ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts