More

  Viral News: 12 ವರ್ಷದ ಬಾಲಕಿಯನ್ನು ಮದುವೆಯಾದ 63ರ ಧರ್ಮಗುರು! ಕಾರಣ ಹೀಗಿದೆ..

  ಘಾನ (ಸೌತ್ ಆಫ್ರಿಕಾ): ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದೆ. 63 ವರ್ಷದ ಪಾದ್ರಿಯೊಬ್ಬರು 12 ವರ್ಷದ ಬಾಲಕಿಯನ್ನು ಮದುವೆಯಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಭಾವಿಯಾಗಿರುವ ಧರ್ಮಗುರುವೊಬ್ಬರು ಬಾಲಕಿಯನ್ನು ಮದುವೆಯಾಗಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

  ಇದನ್ನೂ ಓದಿ: ಡಿಕೆ ಬ್ರದರ್ಸ್​ ಕೋಟೆಯಲ್ಲಿ ಅಮಿತ್ ಶಾ ಬೃಹತ್ ರೋಡ್​ ಶೋ

  ಘಾನದಲ್ಲಿ ಈ ಪ್ರಸಂಗ ನಡೆದಿದ್ದು ಸ್ಥಳೀಯವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾಲ್ಯವಿವಾಹಕ್ಕೆ ಹಾಜರಾದ ಮಹಿಳೆಯರು ಪುಟ್ಟ ಬಾಲಕಿಗೆ ಸಲಹೆಗಳನ್ನು ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಗಂಡನನ್ನು ಆಕರ್ಷಿಸಲು ಒಳ್ಳೆಯ ಬಟ್ಟೆಗಳನ್ನು ತೊಡುವಂತೆ, ತನ್ನ ಪತಿಗೆ ಲೈಂಗಿಕ ಆಕರ್ಷಣೆಯನ್ನು ಹೆಚ್ಚಿಸಲು ಸುಗಂಧ ದ್ರವ್ಯ ಬಳಸುವಂತೆ ಬಾಲಕಿಗೆ ಮಹಿಳೆಯರು ಸಲಹೆ ನೀಡಿದ್ದಾರೆ. ಇದು ಇನ್ನೂ ಹೆಚ್ಚಿನ ಟೀಕೆಗೆ ಗುರಿಯಾಗಿದೆ.

  ಗ್ಬೊರ್ಬು ವುಲೊಮೊ, ನುಮೊ ಬೊರ್ಕೆಟೆ ಲಾವೆಹ್ XXXIII ಎಂಬ ಹೆಸರಿನ ವ್ಯಕ್ತಿ ಮದುವೆಯಾದವರು. ಮಾರ್ಚ್ 30 ರ ಶನಿವಾರ ಘಾನಾದ ನುಂಗುವಾದಲ್ಲಿ ನಾ ಒಕ್ರೊಮೊ ಎಂಬ ಬಾಲಕಿಯನ್ನು ಮದುವೆಯಾಗಿದ್ದಾರೆ.

  ಘಾನಾ ಕಾನೂನು ಸಾಂಪ್ರದಾಯಿಕ ವಿವಾಹಗಳನ್ನು ಮಾನ್ಯ ಮಾಡಿದರೂ, ಸಾಂಸ್ಕೃತಿಕ ಆಚರಣೆಗಳ ನೆಪದಲ್ಲಿ ಬಾಲ್ಯ ವಿವಾಹಗಳನ್ನು ನಿಷೇಧಿಸುತ್ತದೆ. ಘಾನಾದಲ್ಲಿ ಮದುವೆಗೆ ಕಾನೂನುಬದ್ಧ ಕನಿಷ್ಠ ವಯಸ್ಸು 18. ಘಾನಾದಲ್ಲಿ ಬಾಲ್ಯ ವಿವಾಹ ಪ್ರಮಾಣ ಕಡಿಮೆಯಾಗುತ್ತಿದೆ, ಆದರೆ ಈ ಅಭ್ಯಾಸವು ಇನ್ನೂ ಮುಂದುವರೆದಿದೆ ಎಂದು ಬಿಬಿಸಿ ವರದಿ ಮಾಡಿದೆ.

  ಘಾನಾದಲ್ಲಿ ಬಾಲ್ಯವಿವಾಹ ದರಗಳು ಕಡಿಮೆಯಾಗುತ್ತಿವೆ, ಆದರೆ ಈ ಪದ್ಧತಿ ಇನ್ನೂ ಮುಂದುವರಿದಿದೆ ಎಂದು ಬಿಬಿಸಿ ವರದಿ ಮಾಡಿದೆ. ಘಾನಾದಲ್ಲಿ ಸುಮಾರು 19% ಹುಡುಗಿಯರು 18 ನೇ ವಯಸ್ಸನ್ನು ತಲುಪುವ ಮೊದಲು ಮದುವೆಯಾಗಿದ್ದಾರೆ. 5% ರಷ್ಟು ಬಾಲಕಿಯರು ತಮ್ಮ 15 ನೇ ಹುಟ್ಟುಹಬ್ಬದ ಮೊದಲು ಮದುವೆಯಾಗಿದ್ದಾರೆ ಎಂದು NGO ಗರ್ಲ್ಸ್ ನಾಟ್ ಬ್ರೈಡ್ಸ್ ವರದಿ ಹೇಳಿದೆ. ಆದರೆ, ಈ ವಿವಾದಿತ ಬಾಲ್ಯ ವಿವಾಹದ ಬಗ್ಗೆ ಸರ್ಕಾರಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.

  ಲೋಕಸಮರ: ವಿದ್ಯುನ್ಮಾನ ಮತಯಂತ್ರದ ವಿರುದ್ಧ ಮದ್ರಾಸ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ ಡಿಎಂಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts