More

  ಲೋಕಸಮರ: ವಿದ್ಯುನ್ಮಾನ ಮತಯಂತ್ರದ ವಿರುದ್ಧ ಮದ್ರಾಸ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ ಡಿಎಂಕೆ

  ತಮಿಳುನಾಡು: ಲೋಕಸಭೆ ಚುನಾವಣೆಗೆ ಮುನ್ನ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಕುರಿತು ತಮಿಳುನಾಡು ಆಡಳಿತರೂಢ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಮದ್ರಾಸ್​ ಹೈಕೋರ್ಟ್​ನಲ್ಲಿ ಮಂಗಳವಾರ ರಿಟ್ ಅರ್ಜಿ ಸಲ್ಲಿಸಿದೆ.

  ಇದನ್ನೂ ಓದಿ: 2024 ಲೋಕಸಭೆ ಚುನಾವಣೆ: ಕಾಂಗ್ರೆಸ್​ಗೆ ಟಕ್ಕರ್, ಗುಲಾಂ ನಬಿ ಆಜಾದ್ ಸ್ಪರ್ಧೆ ಫಿಕ್ಸ್​ 

  ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ, ಮತಯಂತ್ರ ಮತ್ತು ನಿಯಂತ್ರಣ ಯಂತ್ರ ನಡುವಿನ ಪ್ರಿಂಟರ್ ಅಳವಡಿಸಲಾಗಿದ್ದು, ಕಂಟ್ರೋಲ್ ಯೂನಿಟ್​ನಲ್ಲಿರುವ ನೀಡಲಾದ ಡೇಟಾದ ಸಮಗ್ರತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪ ಮಾಡಿದೆ. ಜನತಾ ಪ್ರಾತಿನಿಧ್ಯ ಕಾಯಿದೆ 1951ರ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. 1961 ರ ನಿಯಮಗಳಾಗಲಿ ಪ್ರಿಂಟರ್ ನಿಯಂತ್ರಣ ಘಟಕದೊಂದಿಗೆ ನೇರ ಸಂಪರ್ಕದಲ್ಲಿರಲು ಅವಕಾಶ ನೀಡುವುದಿಲ್ಲ ಎಂದು ಡಿಎಂಕೆ ಹೇಳಿದೆ.

  ಇವಿಎಂನಲ್ಲಿ ದಾಖಲಾಗಿರುವ ಮತಗಳು ಹೊಂದಾಣಿಕೆ ಆಗದಿದ್ದಲ್ಲಿ ಸಲ್ಲಿಸಬೇಕಾದ ಅರ್ಜಿ ನಮೂನೆ ಸಂಖ್ಯೆ 17C ಕೂಡ ಈ ಕಾಯ್ದೆಯಡಿ ಅನ್ವಯವಾಗುವುದಿಲ್ಲ. ಈ ವಿಷಯವನ್ನು ಕೇಂದ್ರ ಚುನಾವಣಾ ಆಯೋಗವು ಈ ಅಂಶವನ್ನು ತಿಳಿಸಿಲ್ಲ. ಇದರಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ ಡಿಎಂಕೆ ಅರ್ಜಿಯಲ್ಲಿ ತಿಳಿಸಿದೆ.

  ವಿದ್ಯುನ್ಮಾನ ಮತಯಂತ್ರದ ಸಂಕೀರ್ಣತೆಯನ್ನು ಪರಿಗಣಿಸಿದಾಗ ಇಂತಹ ಪ್ರಮುಖ ವಿಷಯಗಳ ನಿರ್ಧಾರಗಳನ್ನು ಸ್ವತಂತ್ರವಾಗಿ ಚುನಾವಣಾ ಆಯೋಗಕ್ಕೆ ಅವಕಾಸ ನೀಡಬಾರದು ಎಂದು ಆಗ್ರಹಿಸಿದೆ. ಇವಿಎಂಗಳನ್ನು ಬಳಸಿಕೊಂಡು ಲೋಕಸಭೆ ಚುನಾವಣೆ ನಡೆಸದಂತೆ ಚುನಾವಣಾ ಆಯೋಗವನ್ನು ಡಿಎಂಕೆ ಪಕ್ಷ ಒತ್ತಾಯ ಮಾಡಿತ್ತು. ಹಾಗೂ ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಪೇಪರ್ ಬ್ಯಾಲೆಟ್​ ವ್ಯವಸ್ಥೆ ಬಳಸಿಕೊಂಡು ಚುನಾವಣೆ ನಡೆಸಬೇಕು ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

  ಮಧ್ಯಪ್ರದೇಶ: ರೈಲ್ವೆ ಸೇತುವೆ ಕುಸಿದು ಐವರಿಗೆ ಗಂಭೀರ ಗಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts