More

    ಗ್ರಾಹಕರೇ ಎಚ್ಚರ.. ಮೇ ತಿಂಗಳಲ್ಲಿ ಬದಲಾಗಲಿರುವ ಬ್ಯಾಂಕ್ ನಿಯಮಗಳಿವು!

    ಮುಂಬೈ: ಇದೇ ಮೇ ತಿಂಗಳಿಂದ ಬ್ಯಾಂಕಿಂಗ್ ವಲಯದಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಇದರಿಂದ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಪ್ರತಿ ತಿಂಗಳ ಆರಂಭದಿಂದ ಬ್ಯಾಂಕ್ ಖಾತೆ ನಿಯಮಗಳು, ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುವುದು ಸಹಜ. ಉಳಿತಾಯ ಖಾತೆಗಳಿಗೆ ಸಂಬಂಧಿಸಿದ ನಿಯಮಗಳು, ಬ್ಯಾಂಕ್ ನಿಯಮಗಳು ಮತ್ತು ಯೋಜನೆಗಳಲ್ಲಿ ಬದಲಾವಣೆಗಳಿರುತ್ತವೆ. ಅದೇ ರೀತಿ ಮೇ ತಿಂಗಳಿನಲ್ಲಿ ಯಾವ ನಿಯಮಗಳು ಬದಲಾಗುತ್ತವೆ ಎಂಬುದರ ವಿವರ ಇಲ್ಲಿದೆ.

    ಇದನ್ನೂ ಓದಿ: ಕಲ್ಕತ್ತಾ ವಿರುದ್ಧ ಅಬ್ಬರಿಸಿದ ಪಂಜಾಬ್​ ಬ್ಯಾಟ್ಸ್​ಮನ್​ಗಳು; ಶಾರುಖ್​ ಪುತ್ರನ ರಿಯಾಕ್ಷನ್​ ವೈರಲ್

    ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಉಳಿತಾಯ ಖಾತೆಯ ಸೇವಾ ಶುಲ್ಕದ ನಿಯಮಗಳನ್ನು ಬದಲಾಯಿಸಿದೆ. ವಾರ್ಷಿಕ ಡೆಬಿಟ್ ಕಾರ್ಡ್ ಶುಲ್ಕದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 99ರೂ., ನಗರ ಪ್ರದೇಶಗಳಲ್ಲಿ 200ರೂ. ಪಾವತಿಸಬೇಕು. ಇನ್ನು ಬ್ಯಾಲೆನ್ಸ್​ಚೆಕ್ ಸಂದರ್ಭದಲ್ಲಿ 25 ಪುಟಗಳವರೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಅದರ ನಂತರ ಪ್ರತಿ ಪುಟಕ್ಕೆ 4 ರೂ. ಪಾವತಿಸಬೇಕು. ಐಎಂಪಿಎಸ್​ ವಹಿವಾಟು ಶುಲ್ಕ 2.50 ರೂ. ನಿಂದ 15 ರೂ. ಎಂದು ನಿರ್ಧರಿಸಲಾಗಿದೆ.

    ಎಚ್​ಡಿಎಫ್​ಸಿ ಬ್ಯಾಂಕ್ ವಿಶೇಷ ಎಫ್​ಡಿ ಯೋಜನೆ: ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್​ಡಿಎಫ್​ಸಿ ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ತನ್ನ ಎಫ್​ಡಿ ಅವಧಿಯನ್ನು ಮೇ 10 ರವರೆಗೆ ವಿಸ್ತರಿಸಿದೆ. ಈ ನಿಶ್ಚಿತ ಠೇವಣಿ ಯೋಜನೆಯಡಿ, ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇಕಡಾ 0.75 ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಹೂಡಿಕೆದಾರರು 5 – 10 ವರ್ಷಗಳ ಅವಧಿಯ ಎಫ್​ಡಿ ಮೇಲೆ 7.75 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಯೋಜನೆಯಡಿ ಹಿರಿಯ ನಾಗರಿಕರು 5 ಕೋಟಿ ರೂ.ತನಕ ಠೇವಣಿ ಮಾಡಬಹುದು.

    ಯೆಸ್ ಬ್ಯಾಂಕ್ ಉಳಿತಾಯ ಖಾತೆ ನಿಯಮಗಳು: ಮೇ 1 ರಿಂದ, ವಿವಿಧ ರೀತಿಯ ಉಳಿತಾಯ ಖಾತೆಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಬದಲಾಗಲಿದೆ. ಯೆಸ್ ಬ್ಯಾಂಕ್ ಪ್ರೊ ಮ್ಯಾಕ್ಸ್ ಕನಿಷ್ಠ ಸರಾಸರಿ ಬ್ಯಾಲೆನ್ಸ್ 50ಸಾವಿರ ರೂ. ಆಗುತ್ತದೆ. ಇದರ ಮೇಲಿನ ಗರಿಷ್ಠ ಶುಲ್ಕ 1ಸಾವಿರ ರೂ. ನಿಗದಿಪಡಿಸಲಾಗಿತ್ತು.

    ಪ್ರೊಪ್ಲಸ್ ಉಳಿತಾಯ ಖಾತೆಗಳು ಎಸ್ ರೆಸ್ಪೆಕ್ಟ್ ಎಸ್ಎ, ಎಸ್ ಎಸೆನ್ಸ್ ಎಸ್ಎ ಕನಿಷ್ಠ ಸರಾಸರಿ ಠೇವಣಿ ಮಿತಿ 25ರೂ. ಗೆ ಪರಿಷ್ಕರಿಸಲಾಗಿದೆ. ಈ ಖಾತೆಗೆ ಗರಿಷ್ಠ ಶುಲ್ಕ 750ರೂ. ನಿಗದಿಪಡಿಸಲಾಗಿತ್ತು. ಬ್ಯಾಂಕ್ ಖಾತೆ ಪ್ರೊನಲ್ಲಿ ಕನಿಷ್ಠ ಬ್ಯಾಲೆನ್ಸ್ 10ಸಾವಿರ ರೂ. ಮತ್ತು ಇದರ ಮೇಲಿನ ಗರಿಷ್ಠ ಶುಲ್ಕ 750ರೂ. ಆಗಿದೆ.

    ‘ಆ ಸಮಯದಲ್ಲಿ ನಾನು ಆ ಚಟಕ್ಕೆ ಬಿದ್ದಿದ್ದೆ’: ಸ್ಟಾರ್ ಹೀರೋಯಿನ್ ಬಿಚ್ಚಿಟ್ಟ ಸತ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts