ಡಾ.ಶಿವಕುಮಾರ ಶ್ರೀಗೆ ಚಿನ್ನದ ಕಂತಿ ಪ್ರಶಸ್ತಿ

sidd renuk swamiji
Published on

ಕಲಬುರಗಿ: ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಿಂದ ನೀಡುವ ಚಿನ್ನದ ಕಂತಿ ಪ್ರಶಸ್ತಿಗೆ ಬೀದರ್‌ನ ಚಿದಂಬರ ಆಶ್ರಮದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಗುರು ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠ ಪೀಠದ ಸಿದ್ಧರೇಣುಕ ಶಿವಾಚಾರ್ಯರು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಬಿ.ಎಚ.ನಿರುಗುಡಿ ತಿಳಿಸಿದರು.
ತಾಜಸುಲ್ತಾನಪುರದಲ್ಲಿನ ಶಾಖಾ ಮಠದ ಆವರಣದಲ್ಲಿ ೨೯ರಂದು ಸಂಜೆ ೬ಕ್ಕೆ ನಡೆಯಲಿರುವ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರ ಷಷ್ಠಿಪೂರ್ತಿ ಸಮಾರಂಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗೆ ವಾದ್ಯ-ವೈಭವಗಳೊಂದಿಗೆ ಮೆರವಣಿಗೆ ಮೂಲಕ ಕರೆ ತಂದು ಚಿನ್ನದ ಕಂತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಡಾ.ಶಿವಕುಮಾರ ಸ್ವಾಮೀಜಿ ಅವರು ಕರ್ನಾಟಕ ಸೇರಿ ದಕ್ಷಿಣ ಭಾರತಾದ್ಯಂತ ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಪೂಜ್ಯರು ಆರು ದಶಕದಿಂದ ನಿರಂತರವಾಗಿ ಧರ್ಮ ಪ್ರಸಾರ ಮಾಡಿ, ಬದುಕನ್ನು ಸಮಾಜ ಸೇವೆಗೆ ಅರ್ಪಿಸಿದ್ದಾರೆ. ಕಾಶಿಯಲ್ಲಿ ಎಂಎ ತತ್ವe್ಞÁನ ಪೂರೈಸಿ ಕನ್ನಡ, ಆಂಗ್ಲ, ತೆಲುಗು, ಹಿಂದಿ ಸೇರಿ ಒಂಬತ್ತು ಭಾಷೆಯಲ್ಲಿ ಪ್ರವಚನ ಮಾಡಿ, ಕೋಟ್ಯಂತರ ಮನಸ್ಸುಗಳಿಗೆ ಧರ್ಮದ ನಿಜತಿರುಳನ್ನು ಬೋಧಿಸಿz್ದÁರೆ. ಅವರ ಹಲವು ಸಮಾಜ ಸೇವೆ ಗುರುತಿಸಿ ಚಿನ್ನದ ಕಂತಿ ನೀಡಲಾಗಿದೆ ಎಂದರು.
ಪ್ರಮುಖರಾದ ಹಣಮಂತರಾಯ ಅಟ್ಟೂರ, ಶರಣಗೌಡ ಪಾಟೀಲï ಪಾಳಾ, ರವಿ ಶಹಾಪುರಕರï, ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net