ಎಲೆಕ್ಷನ್​ ಬೆಟ್ಟಿಂಗ್​ಗೂ ಶುರುವಾಯ್ತು ಕರಾರು ಪತ್ರ!

election betting
Published on

ಬೆಂಗಳೂರು: ಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್‌ಗೂ ಈಗ ಅಗ್ರಿಮೆಂಟ್ ಶುರುವಾಗಿದೆ. ಇಲ್ಲೊಬ್ಬರು ಛಾಪಾ ಕಾಗದದಲ್ಲಿ 5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.

ಹೆಚ್​ಡಿ ಕೋಟೆ ಕ್ಷೇತ್ರದಲ್ಲಿ ಬೆಟ್ಟಿಂಗ್ ಬಗ್ಗೆ ಮಾಡಿಕೊಂಡಿರುವ ಕರಾರು ಪತ್ರದ ಫೋಟೊ ಒಂದು ಹರಿದಾಡುತ್ತಿದೆ. ಜಯರಾಮ ನಾಯಕ ಹಾಗೂ ಪ್ರಕಾಶ್, ಶಿವರಾಜ್ ಎನ್ನುವವರ ನಡುವೆ ಒಪ್ಪಂದ ನಡೆದಿದೆ.

ಪ್ರಕಾಶ್ ಹಾಗೂ ಶಿವರಾಜ್, ಜೆಡಿಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಪರವಾಗಿ ಬೆಟ್​ ಮಾಡಿದ್ದು ಜಯರಾಮ ನಾಯ್ಕ‌ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರವಾಗಿ ಪಣವನ್ನು ಇಟ್ಟಿದ್ದಾರೆ. ಎರಡೂ ಪಕ್ಷದವರು ತಲಾ 5 ಲಕ್ಷ ಬೆಟ್ಟಿಂಗ್ ಕಟ್ಟಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ.

10 ಲಕ್ಷವನ್ನು ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ‌ ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದ್ದು ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರು ಹಣ ವಾಪಸ್ಸು ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net