More

    ತಾರಕ ನದಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ತೆರವು

    ಎಚ್.ಡಿ.ಕೋಟೆ: ಪುರಸಭಾ ವ್ಯಾಪ್ತಿಯಲ್ಲಿ ಕೋಳಿ, ಮೀನು, ಮಾಂಸ ಮಾರಾಟ ಮಾಡುವವರು ತ್ಯಾಜ್ಯಗಳನ್ನ ತಾರಕ ನದಿಗೆ ಬಿಸಾಡುತ್ತಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಮುಖ್ಯಾಕಾರಿ ಸುರೇಶ್ ತಿಳಿಸಿದರು.

    ತಾರಕ ನದಿಗೆ ಮೀನು, ಮಾಂಸ, ಕೋಳಿ ತ್ಯಾಜ್ಯ ಬಿಸಾಡಲಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅಕಾರಿಗಳು, ಪೌರಕಾರ್ಮಿ ಕರೊಂದಿಗೆ ನದಿಯ ಬಳಿಗೆ ಆಗಮಿಸಿದ ಸುರೇಶ್, ನದಿಯಲ್ಲಿ ತೇಲುತ್ತಿರುವ ತ್ಯಾಜ್ಯವನ್ನು ಸ್ವಚ್ಛ ಮಾಡಿಸಿ ಮಾತನಾಡಿದರು.

    ಈ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಪಡೆಯಲಾಗುತ್ತಿತ್ತು. ಹಾಗಾಗಿ ಪುರಸಭೆ ವಾಹನ ಅಂಗಡಿ ಬಳಿಗೆ ತೆರಳಿ ತ್ಯಾಜ್ಯ ಸಂಗ್ರಹಿಸುತ್ತಿತ್ತು. ಆದರೀಗ ಅಂಗಡಿ ಮಾಲೀಕರು ಪರವಾನಗಿ ಪಡೆಯದ ಕಾರಣ ವಾಹನಗಳು ಅಂಗಡಿ ಬಳಿ ತೆರಳುತ್ತಿಲ್ಲ. ಹಾಗಾಗಿ ಮಾಲೀಕರಿಗೆ ಅಂಗಡಿಯಲ್ಲಿನ ತ್ಯಾಜ್ಯವನ್ನು ವಡ್ಡರಗುಡಿ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಲಾಗಿತ್ತು. ಆದರೂ ಕೂಡ ಅಂಗಡಿ ಮಾಲೀಕರು ನಿಯಮ ಪಾಲಿಸದೆ ತಾರಕ ನದಿಗೆ ಬಿಸಾಡುತ್ತಿದ್ದಾರೆ ಎಂದರು.

    ತಿಂಗಳ ಅಂತ್ಯಕ್ಕೆ ಪರವಾನಗಿ ಪಡೆಯದಿದ್ದಲ್ಲಿ ಅಂತಹ ಅಂಗಡಿಗಳನ್ನು ಮುಚ್ಚಿಸಲಾಗುವುದು. ಅಲ್ಲದೆ ನದಿಗೆ ತ್ಯಾಜ್ಯ ಬಿಸಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಪರಿಸರ ಇಂಜಿನಿಯರ್ ರಕ್ಷಿತ್, ಆರೋಗ್ಯ ನಿರೀಕ್ಷಕ ಹರೀಶ್, ಸ್ವಚ್ಛತೆ ಮೇಲ್ವಿಚಾರಕರಾದ ಸುಬ್ರಮಣ್ಯ, ಗಣೇಶ್, ಶ್ರೀರಂಗ, ಸಿಬ್ಬಂದಿ ಮಂಜು, ಬಣ್ಣಾರಿ, ವಿರಾಜ್, ಕುಮಾರ್, ಗಣೇಶ್, ವೆಂಕಟೇಶ್, ನಂಜಯ್ಯ ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಜನರು ಸ್ವಚ್ಛತಾ ಕಾರ್ಯಕ್ರಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಮಾಂಸ, ಮೀನು, ಕೋಳಿ ತ್ಯಾಜ್ಯವನ್ನು ತಾರಕ ನದಿಗೆ ಬಿಸಾಡುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಅಂಗಡಿ ಮಾಲೀಕರಿಗೆ ಈಗಾಗಲೇ ತಿಳಿಸಿದ್ದರೂ ತ್ಯಾಜ್ಯವನ್ನು ನದಿಗೆ ಬಿಸಾಡಿತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಲು ಅಂಗಡಿ ಬಳಿ ತೆರಳಿದ್ದ ಅಕಾರಿಗಳ ಮೇಲೆ ಗಲಾಟೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕ್ರಮ ತೆಗೆದುಕೊಳ್ಳಬೇಕು.
    ಎಚ್.ಸಿ.ನರಸಿಂಹಮೂರ್ತಿ ಪುರಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts