More

    ಮತದಾನ ಮುಗಿದ ಬೆನ್ನಲ್ಲೆ ಸೋಲು-ಗೆಲುವು ಲೆಕ್ಕಾಚಾರ ಶುರು

    ಬೆಂಗಳೂರು:
    ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲಿಯೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
    14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರದ ಜೊತೆಗೆ ಮತದಾನ ಪ್ರಮಾಣ ಹೆಚ್ಚಾಗಿರುವುದು ಮತ್ತು ಕೆಲವು ಕಡಿಮೆ ಆಗಿರುವುದು ಕೂಡ ಚರ್ಚೆಯಲ್ಲಿ ಮಹತ್ವದ ಸಂಗತಿಯಾಗಿರುವುದು ವಿಶೇಷ.
    ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಜಾತಿವಾರು ಲೆಕ್ಕ ಹಿಡಿದು ಚರ್ಚೆ ಮಾಡುತ್ತಿರುವ ಕಾರ್ಯಕರ್ತರು, ಈ ಕಾರಣಕ್ಕಾಗಿ ಇಂತಿಂಥ ಕ್ಷೇತ್ರಗಳಲ್ಲಿ ಲೀಡ್ ಬರಲಿದೆ. ಇಂಥ ಕ್ಷೇತ್ರಗಳಲ್ಲಿ ಹಿನ್ನೆಡೆಯಾಗಲಿದೆ ಎಂದು ಅಂಕಿ ಅಂಶಗಳನ್ನು ಮುಂದಿಡುತ್ತಿದ್ದಾರೆ.
    ತೀವ್ರ ಹಣಾಹಣಿ ಇದ್ದ ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಹಣ ಹಂಚಿಕೆಯಾಗಿದೆ ಎನ್ನುವುದು ಮುನ್ನೆಲೆಗೆ ಬಂದಿದೆ. ಅಷ್ಟೆ ಅಲ್ಲ, ಕೊನೆ ಕ್ಷಣದಲ್ಲಿ ಗೆಲುವುದು ತಮ್ಮ ಕಡೆಗೆ ಒಲಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಎಷ್ಟೆಷ್ಟು ಗ್‌ಟಿ ಕೂಪನ್ ಹಂಚಲಾಗಿದೆ. ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲ ತಂದಿದೆ.
    ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಬಗ್ಗೆ ಪೆನ್ ಡ್ರೈವ್‌ನಲ್ಲಿ ಹರಡಿದ ಚಿತ್ರಾವಳಿಗಳು ಕ್ಷೇತ್ರ ಲಿತಾಂಶವನ್ನೆ ಬುಡಮೇಲು ಮಾಡುವಷ್ಟರ ಮಟ್ಟಿಗೆ ಬದಲಾವಣೆಗೆ ಪರಿಣಾಮ ಬೀರಿರಬಹುದು ಎನ್ನುವ ಸಂಗತಿಯೂ ಚರ್ಚೆಗೆ ಗ್ರಾಸವಾಗಿದೆ.
    ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿ ಎಷ್ಟೆಷ್ಟು ಮತದಾನವಾಗಿತ್ತು? ಈ ಬಾರಿ ಎಷ್ಟಾಗಿದೆ ಎನ್ನುವುದನ್ನು ತಾಳೆ ಹಿಡಿದು ನೋಡುತ್ತಿರುವ ಕಾರ್ಯಕರ್ತರು, ಮತದಾನ ಕಡಿಮೆಯಾದರೆ ಯಾರಿಗೆ ವರ, ಮತದಾನ ಹೆಚ್ಚಾದರೆ ಯಾರಿಗೆ ಮುಳುವು ಎನ್ನುವ ಅಂಶಗಳ ಬಗ್ಗೆಯೂ ಬೆಳಕು ಚೆಲ್ಲಿ ಮಾತನಾಡುತ್ತಿದ್ದಾರೆ.
    ಚುನಾವಣೆಯಲ್ಲಿ ಯಾರಿಗೆ ಗೆಲುವು-ಸೋಲು ಎನ್ನುವ ಬಗ್ಗೆ ಈಗಿನಿಂದಲೇ ಬೆಟ್ಟಿಂಗ್ ಶುರುವಾಗಿದೆ. ದಿನ ಕಳೆದಂತೆ ಬೆಟ್ಟಿಂಗ್ ಇನ್ನೂ ಜೋರಾಗಲಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts