More

  ಲೋಕಸಭೆ ಚುನಾವಣೆ ಪ್ರಚಾರ; ಸ್ಟಾರ್‌ಗಳಿಗೆ ಬಾರದ ಡಿಮ್ಯಾಂಡ್

  ಬೆಂಗಳೂರು:
  ಲೋಕಸಭಾ ಚುನಾವಣೆ ಪ್ರಚಾರಕ್ಕೆ ಈ ಬಾರಿ ಯಾಕೋ ಸಿನಿಮಾ ನಟ ನಟಿಯರಿಗೆ ಡಿಮ್ಯಾಂಡ್ ಬರಲೇ ಇಲ್ಲ.
  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಬಹುಪಾಲು ನಟ ನಟಿಯರಿಗೆ ಒಂದಲ್ಲ ಒಂದು ರೀತಿಯಲ್ಲಿ ಬೇಡಿಕೆ ಇತ್ತು. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ದರ್ಶನ್ ಮಾತ್ರ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕಾಣಿಸಿಕೊಂಡರು.
  ಇನ್ನು ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಪರವಾಗಿ ಶಿವಮೊಗ್ಗದಲ್ಲಿ ಮೊಕ್ಕಾಂ ಹೂಡಿದ್ದರು. ಅವರ ಪರವಾಗಿ ದುನಿಯಾ ವಿಜಿ, ಯೋಗಿ ಮತ್ತಿತರರು ಪ್ರಚಾರ ಮಾಡಿದರು. ಇನ್ನುಳಿದಂತೆ ಎಲ್ಲಿಯೂ ಸಿನಿಮಾ ನಟ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.
  ಇನ್ನು ಪಕ್ಷದ ಪರವಾಗಿ ಬಿಜೆಪಿಯಲ್ಲಿ ತಾರಾ ಅನೂರಾಧ, ಶೃತಿ, ಮಾಳವಿಕ ಕೆಲವು ಕಡೆಯಲ್ಲಿ ಪ್ರಚಾರ ಮಾಡಿದರು. ಅದೇ ರೀತಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಸಾಧುಕೋಕಿಲಾ ಮತ್ತಿತರರು ಪ್ರಚಾರ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts