More

    ದೇಶ ಕಂಡ ಶ್ರೇಷ್ಠ ನಾಯಕ

    ಎಚ್.ಡಿ.ಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ದೇಶ ಕಂಡ ಶ್ರೇಷ್ಠ ನಾಯಕ ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರು ಸಾಮಾಜಿಕವಾಗಿ ಮೂಡಿಸಿದ ಚಿಂತನೆಗಳು ಹಿರಿದಾಗಿವೆ ಎಂದರು.

    ಸ್ವಾತಂತ್ರ ಪೂರ್ವದಲ್ಲಿ ಭಾರತೀಯರಿಗೆ ಮತದಾನದ ಹಕ್ಕು ಕೊಡಬೇಕು ಎಂದು ಪ್ರತಿಪಾದಿಸಿದಾಗ ಅನಕ್ಷರಸ್ಥ ಸಮುದಾಯಕ್ಕೆ ಮತದಾನ ಬೇಡ ಎಂದಾಗ ಅಂಬೇಡ್ಕರ್ ಅವರು ಮತದಾನ ಮಾಡಲು ಶಿಕ್ಷಣ ಬೇಕಿಲ್ಲ ಎಂದು ಅರಿತು ಎಲ್ಲರಿಗೂ ಮತದಾನ ಹಕ್ಕು ನೀಡಿ ಎಂದು ಒತ್ತಾಯಿಸಿದ್ದರು ಎಂದು ಸ್ಮರಿಸಿದರು.
    ಆದಿಕರ್ನಾಟಕ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ, ಭಾರತ ದೇಶ ಅಲ್ಲದೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ರಾಷ್ಟ್ರ ನಾಯಕ ಒಬ್ಬರ ಜನ್ಮದಿನವನ್ನು ಗೌರವ ಪೂರ್ವಕವಾಗಿ ಆಚರಣೆ ಮಾಡುತ್ತಾರೆ. ಅಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ. ಸಂವಿಧಾನಕ್ಕೆ ಗೌರವ ಕೊಟ್ಟು ಕೆಲಸ ಮಾಡಿದಾಗ ಅವರ ಜನ್ಮ ದಿನಾಚರಣೆಗೆ ಗೌರವ ಕೊಟ್ಟಂತೆ ಎಂದರು.

    ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಹೇಳುವುದಕ್ಕೆ ಯಾವುದೇ ನೀತಿ ಸಂಹಿತೆ ಇರುವುದಿಲ್ಲ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
    ಇಒ ಧರಣೀಶ್, ಬಿಇಒ ಮರಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಎಇಒ ರಂಗಸ್ವಾಮಿ, ಗೋಪಾಲಕೃಷ್ಣ ಮೂರ್ತಿ, ಮಲಾರ ಪುಟ್ಟಯ್ಯ, ನಂಜುಂಡಮೂರ್ತಿ, ಚಂದ್ರಶೇಖರ್ ಮೂರ್ತಿ, ಲಾಟರಿ ನಾಗರಾಜು, ಸಣ್ಣಕುಮಾರ್, ವನಸಿರಿ ಶಂಕರ, ಆನಂದ ಕೆ.ಜಿ.ಹಳ್ಳಿ, ದೇವರಾಜು ಆನಗಟ್ಟಿ, ಪುಟ್ಟಮಾದು ಕೋಟೆ, ಶಿವಯ್ಯ ಕೃಷ್ಣಾಪುರ, ರಮೇಶ್, ಚನ್ನ ಕೋಟೆ, ಮಾಹದೇವಯ್ಯ, ಚಂದ್ರು ಹೆಗ್ಗಡಪುರ, ರವಿ ಜಿ.ಜಿ. ಕಾಲನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts