More

    ಸಂವಿಧಾನದ ಬಲದಿಂದ ಜ್ಞಾನ ವೃದ್ಧಿ: ನ್ಯಾಯಮೂರ್ತಿ ಆರ್​. ದೇವದಾಸ್​ ಹೇಳಿಕೆ

    ಬೆಂಗಳೂರು: ಡಾ.ಬಿ.ಆರ್​.ಅಂಬೇಡ್ಕರ್​ ರಚಿಸಿರುವ ಸಂವಿಧಾನದ ಬಲದಿಂದ ವಿದ್ಯಾರ್ಥಿಗಳು ಜ್ಞಾನ ವೃದ್ಧಿಸಿಕೊಳ್ಳಬೇಕೆಂದು ಹೈಕೋರ್ಟ್​ ನ್ಯಾಯಮೂರ್ತಿ ಆರ್​.ದೇವದಾಸ್​ ಹೇಳಿದ್ದಾರೆ.

    ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಸೋಮವಾರ ಪುರಭವನದಲ್ಲಿ ಆಯೋಜಿಸಿದ್ದ “ಅಂಬೇಡ್ಕರ್​ ಜನ್ಮ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮ ಸಮಾಜ ಕನಸು ಕಂಡವರು ಅಂಬೇಡ್ಕರ್​. ಸಿವಿಲ್​ ನ್ಯಾಯಧೀಶರ ನೇಮಕಾತಿ ಆಯ್ಕೆಯಲ್ಲಿ ಹೆಚ್ಚಿನ ಸಂಖ್ಯೆ ಎಸ್ಸಿ,ಎಸ್ಟಿ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಮೇರಿಟ್​ ಆಧಾರದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್​ನಲ್ಲಿ ಸೀಟ್​ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದರು.

    ಮತದಾನ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ:ತುಷಾರ್​ ಗಿರಿನಾಥ್​ ಹೇಳಿಕೆ
    ನಟ ಶರಣ್​ ಮಾತನಾಡಿ, ನಮ್ಮ ಜೀವನದಲ್ಲಿ ಅಂಬೇಡ್ಕರ್​ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಪ್ರಪಂಚ ಕಂಡ ಅಮೂಲ್ಯ ರತ್ನ ಇವರು. “ಇತಿಹಾಸ ಅರಿವಿಲ್ಲದವರು, ಇತಿಹಾಸ ಸೃಷ್ಟಿಸಲಾರ’ ಎಂದು ಹೇಳಿದ್ದರು. ಅಪ್ರತಿಮವಾದ ಶಕ್ತಿ ಅಂಬೇಡ್ಕರ್​ ಆಗಿದ್ದರು ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ ಎ.ಅಮೃತ್​ರಾಜ್​, ಸುಮಂಗಲಿ ಸೇವಾ ಆಶ್ರಮ ಅಧ್ಯೆ ಎಸ್​.ಜಿ.ಸುಶೀಲಮ್ಮ, ಬಿಬಿಎಂಪಿ ಕಂದಾಯ ವಿಭಾಗ ಜಂಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts