More

    ಮತದಾನ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ:ತುಷಾರ್​ ಗಿರಿನಾಥ್​ ಹೇಳಿಕೆ

    ಬೆಂಗಳೂರು: ಕಳೆದ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಹಂತದಲ್ಲಿ ಮತದಾನವಾಗಿದ್ದ ಮತಗಟ್ಟೆಗಳ ಮೇಲೆ ವಿಶೇಷ ಗಮನಹರಿಸಿ ವೋಟಿಂಗ್​ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್​ ಗಿರಿನಾಥ್​ ಹೇಳಿದ್ದಾರೆ.

    ಮತಗಟ್ಟೆಗಳ ವ್ಯಾಪ್ತಿಯ ಬೂತ್​ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮನೆಗಳ ಮುಂದೆ ಓಟರ್​ ಸ್ಟಿಕ್ಕರ್​ಗಳನ್ನು ಅಂಟಿಸಲಿದ್ದಾರೆ. ಇದಕ್ಕಾಗಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಓಟರ್​ ಸ್ಲಿಪ್​, ಓಟರ್​ ಗೈಡ್​ಗಳನ್ನು ತ್ವರಿತಗತಿಯಲ್ಲಿ ವಿತರಿಸಬೇಕು. ಓಟರ್​ ಸ್ಲಿಪ್​ನ ಹಿಂಭಾಗದಲ್ಲಿ ಕ್ಯೂಆರ್​ ಕೋಡ್​ ಮುದ್ರಿಸಲಾಗುವುದು. ವೋಟಿಂಗ್​ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಜನರಿಗೆ ಮಾಹಿತಿ ನೀಡುವ ಮೂಲಕ ಮತದಾನ ನಡೆಯುವ ದಿನದಂದು ಹೆಚ್ಚು ಮತದಾರರು ಮತಗಟ್ಟೆಗಳಿಗೆ ಆಗಮಿಸುವಂತೆ ಹುರಿದುಂಬಿಸಲಾಗುತ್ತಿದೆ ಎಂದರು.

    ಪ್ರಲ್ಹಾದ ಜೋಶಿ ನಾಮಪತ್ರ ಸಲ್ಲಿಕೆ; ಮೂವರು ಮಾಜಿ ಸಿಎಂಗಳು ಭಾಗಿ

    ಮನೆಯಿಂದ 7,367 ಮಂದಿ ಮತದಾನ: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರದವರೆಗೆ 85 ವರ್ಷ ಮೇಲ್ಪಟ್ಟವರು,ಅಂಗವಿಕಲರು ಒಟ್ಟು 7,367 ಮಂದಿ ಮನೆಯಲ್ಲಿ ಮತದಾನ ಮಾಡಿದ್ದಾರೆ.ಏ.18ರವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ರಾಜಧಾನಿಯಲ್ಲಿ 7,858 ಮಂದಿ ಪೈಕಿ 7,367 ಮಂದಿ ಮತದಾನ ಮಾಡಿದ್ದು, ಶೇ.93 ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ ಕ್ಷೇತ್ರದಲ್ಲಿ 1,663, ಬೆಂಗಳೂರು ಉತ್ತರ 1,685, ಬೆಂಗಳೂರು ದಣ 2,117 ಹಾಗೂ ಬೆಂಗಳೂರು ನಗರದಲ್ಲಿ 1,902 ಮಂದಿ ಮತದಾನ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts