More

    60 ವರ್ಷದ ಲವ್​ಸ್ಟೋರಿ; ಮಕ್ಕಳು, ಮೊಮ್ಮಕ್ಕಳ ಎದುರು 80ನೇ ವಯಸ್ಸಿನಲ್ಲಿ ಮದುವೆಯಾದ ಜೋಡಿ

    ನವದೆಹಲಿ: ಪ್ರೀತಿಗೂ ಮದುವೆಗೂ ವಯಸ್ಸಿಗೂ ಸಂಬಂಧವಿಲ್ಲ ಎಂದು ಕೆಲವರು ಸಾಬೀತುಪಡಿಸುತ್ತಾರೆ. ಮಕ್ಕಳು ತಮ್ಮ ಒಂಟಿ ತಾಯಿ ಅಥವಾ ತಂದೆಗೆ ಮರುಮದುವೆ ಮಾಡುತ್ತಾರೆ. ಆದರೆ 60 ವರ್ಷಗಳಿಂದ ಪ್ರೀತಿಯಲ್ಲಿದ್ದು, ಜೊತೆಗೆ ಇದ್ದ  ಈ ಜೋಡಿ ವೃದ್ಧಾಪ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    80 ವರ್ಷದ ವ್ಯಕ್ತಿಯೊಬ್ಬ ತನ್ನ 70 ವರ್ಷದ ಗೆಳತಿಯನ್ನು ಮದುವೆಯಾಗಿದ್ದಾನೆ.  ಟ್ವೀಸ್ಟ್​​ ಏನಪ್ಪಾ ಅಂದ್ರೆ ಈ ಜೋಡಿಗೆ  ಇಟ್ಟು ವರ್ಷಗಳ ಕಾಲಿ ಒಟ್ಟಿಗೆ ಜೀವನ ನಡೆಸುತ್ತಿತ್ತು. ಇವರಿಗೆ ಮಕ್ಕಳು ಕೂಡಾ ಇದ್ದಾರೆ. ಆದರೆ  ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಸದ್ಯ ಈ ಮದುವೆಯ ವಿಡಿಯೋ ವೈರಲ್ ಆಗಿದೆ. ಮಹಬೂಬಾಬಾದ್ ಜಿಲ್ಲೆಯಲ್ಲಿ ಈ ಅಪರೂಪದ ಮದುವೆ ನಡೆದಿದೆ.

    ಸಮೀದಾ ನಾಯ್ಕ (80) ಮತ್ತು ಗೋಗುಲೋತ್ ಲಾಲಿ (70) ದಂಪತಿ ಈ ಹಿಂದೆ ಗಂಧರ್ವ ಮದುವೆಯಾಗಿದ್ದರು. ಅಂದರೆ ಹಾರಗಳನ್ನು ಮಾತ್ರ ಬದಲಾಯಿಸಲಾಗಿದೆ. ಆ ಕಾಲದಲ್ಲಿ ತಾಳಿ ಕಟ್ಟುವ ಪದ್ಧತಿ ಇರಲಿಲ್ಲ..ಹೀಗೆ ಮದುವೆಯಾದರು. ಹಾಗೆ ಬದುಕುತ್ತಿರುವಾಗ ಅವರಿಗೆ ನಾಲ್ವರು ಗಂಡು ಮತ್ತು ಒಬ್ಬಳು ಮಗಳು ಇದ್ದಾರೆ.

    ಈ ಜೋಡಿ ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿದ್ದರು. ಮಕ್ಕಳಿದ್ದರು. ಕುಟುಂಬ ಇತ್ತು ಆದ್ರೆ ಈ ಸಂಬಂಧ ಕ್ಷೀಣಿಸಲಿಲ್ಲ. ತಾಯಿ ಕೊರಳಲ್ಲಿ ಮಂಗಳಸೂತ್ರ ಇರಲಿಲ್ಲ ಈ ನೋವನ್ನು ಅರ್ಥಮಾಡಿಕೊಂಡ ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು… ಕೊನೆಗೂ ಇದೇ ತಿಂಗಳ 28ರಂದು ವೃದ್ಧ ದಂಪತಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿದ್ದಾರೆ.  .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts