More

    ಇಂದಿನಿಂದ ಸಮುದಾಯ ಜೀವನ ಶಿಬಿರ: ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದಿಂದ ತುಂಬಕೆರೆಯಲ್ಲಿ ಮೂರು ದಿನ ಆಯೋಜನೆ..!

    ಮಂಡ್ಯ: ತಾಲೂಕಿನ ತುಂಬಕೆರೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದಿಂದ ಏ.30 ರಿಂದ ಮೇ.2ರವರೆಗೆ ಸಮುದಾಯ ಜೀವನ ಶಿಬಿರ ಆಯೋಜಿಸಲಾಗಿದೆ.
    30ರಂದು ಬೆಳಗ್ಗೆ 6ಗಂಟೆಗೆ ಧ್ವಜಾರೋಹಣ, 6.30ಕ್ಕೆ ಯೋಗ ಮತ್ತು ಧ್ಯಾನ, 11ಗಂಟೆಗೆ ಶಿಬಿರವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪದವಿ ಪೂರ್ವ) ಸಹಾಯಕ ನಿರ್ದೇಶಕ ಗುಬ್ಬಿಗೂಡು ರಮೇಶ್ ಉದ್ಘಾಟಿಸಲಿದ್ದು, ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
    ಮಧ್ಯಾಹ್ನ 3ಗಂಟೆಗೆ ವಿಶೇಷ ಉಪನ್ಯಾಸದಲ್ಲಿ ಜಿಲ್ಲಾಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮ ಸಂಯೋಜಕಿ ಆರ್.ಶೋಭಾವತಿ ‘ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಕಾನೂನುಗಳ ಕುರಿತು’ ವಿಷಯ ಮಂಡಿಸಲಿದ್ದಾರೆ. ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ನಾಗರತ್ನಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5ಗಂಟೆಗೆ ಆಟೋಟ, ಶ್ರಮದಾನ, 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವಿರಲಿದೆ.
    ಮೇ.1ರಂದು ಬೆಳಗ್ಗೆ 6ಕ್ಕೆ ಧ್ವಜಾರೋಹಣ, 6.30ಕ್ಕೆ ಯೋಗ ಮತ್ತು ಧ್ಯಾನ, 11ಗಂಟೆಗೆ ಅಗ್ನಿ ಅವಘಡ ಕುರಿತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ ಪ್ರಾತ್ಯಕ್ಷಿತೆ ನೀಡಲಿದ್ದಾರೆ. 3ಗಂಟೆಗೆ ಪಾಂಡವಪುರ ಸ.ಪ.ಪೂ ಕಾಲೇಜಿನ ಉಪಪ್ರಾಂಶುಪಾಲ ಎನ್.ಮಹದೇವಪ್ಪ ‘ಪವಾಡ ಮತ್ತು ವಿಜ್ಞಾನ’ ಪ್ರಾತ್ಯಕ್ಷಿತೆ ನಡೆಸಿಕೊಡಲಿದ್ದಾರೆ. ಸಂಜೆ 5ಕ್ಕೆ ಆಟೋಟ, ಶ್ರಮದಾನ, 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
    2ರಂದು ಬೆಳಗ್ಗೆ 6ಕ್ಕೆ ಧ್ವಜಾರೋಹಣ, 11ಗಂಟೆಗೆ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಚನ್ನಕೃಷ್ಣಯ್ಯ ‘ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ’ ಕುರಿತು ವಿಷಯ ಮಂಡಿಸಲಿದ್ದಾರೆ. ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಎಂ.ಆರ್.ರಾಮಾರಾಧ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ಎಸ್.ಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ(ಆಡಳಿತ) ಡಾ.ಕೆ.ಬಿ.ಪ್ರವೀಣ್‌ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಬಳಿಕ ಬಹುಮಾನ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts